ಆ 13: ದೆಹಲಿ ಜವಾಹರಲಾಲ್ ನೆಹರು ಯೂನಿರ್ವಸಿಟಿ ವಿದ್ಯಾರ್ಥಿ ಮುಖಂಡ , ಉಮರ್ ಖಾಲಿದ್ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಗುಂಡು ಹಾರಿಸಿದ ಘಟನೆ ಸೋಮವಾರ ದೆಹಲಿಯ ಸಂಸದ್ ಮಾರ್ಗ ಪ್ರದೇಶದಲ್ಲಿನ ಹೊರವಲಯದಲ್ಲಿ ನಡೆದಿದೆ.ಉಮರ್ ಖಾಲಿದ್ ದೆಹಲಿಯ ರಫಿ ಮಾರ್ಗದ ಬಳಿ ಇರುವ ಕಾನ್ ಸ್ಟಿಟ್ಯೂಷನ್ ಕ್ಲಬ್ ಆಫ್ ಇಂಡಿಯಾ ಕಟ್ಟಡದಲ್ಲಿ ನಡೆಯಲಿರುವ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಿದ್ದರು. ಇದೇ ಕಟ್ಟಡದ ರಸ್ತೆ ಬದಿಯ ಅಂಗಡಿಯಲ್ಲಿ ಉಮರ್ ಖಾಲಿದ್ ಚಹಾ ಕುಡಿಯುವ ಸಂದರ್ಭ ದಾಳಿ ನಡೆದಿದೆ ಎಂದು ಪೊಲೀಸರು ವಿವರಿಸಿದ್ದಾರೆ.
ಗುಂಡಿನ ದಾಳಿಯಿಂದ ಖಾಲಿದ್ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ದುಷ್ಕರ್ಮಿ ಉಮರ್ ಹೊಟ್ಟೆಗೆ ಪಿಸ್ತೂಲ್ ಹಿಡಿದಾಗ ಉಮರ್ ಪಕ್ಕದಲ್ಲೆ ಇದ್ದ ಸ್ನೇಹಿತ ಒದ್ದಿದ್ದಾನೆ. ಇದರಿಂದಾಗಿ ಗುಂಡು ತಗುಲದೆ ಅಪಾಯದಿಂದ ಪಾರಾಗಿರುವುದಾಗಿದ್ದಾರೆ. ಘಟನೆಯ ಬಳಿಕ ದುಷ್ಕರ್ಮಿ ಪರಾರಿಯಾಗಿದ್ದಾನೆ.ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಕ್ಯಾಂಪಸ್ ನಲ್ಲಿ 2016ರ ಫೆ.9ರಂದು ನಡೆದ ಕಾರ್ಯಕ್ರಮದಲ್ಲಿ ಉಮರ್ ಖಾಲಿದ್ ದೇಶ ವಿರೋಧಿ ಘೋಷಣೆ ಕೂಗಿರುವ ಆರೋಪದಲ್ಲಿ ಶಿಕ್ಷೆಗೆ ಒಳಗಾಗಿದ್ದ.