ಸುಬ್ರಹ್ಮಣ್ಯ, ಆ 13: ಸಿಎಂ ಕುಮಾರಸ್ವಾಮಿ ಕುಕ್ಕೆ ಸುಬ್ರಹ್ಮಣ್ಯ ದೇವಳಕ್ಕೆ ಭೇಟಿ ನೀಡುವ ಹಿನ್ನೆಲೆ ಸಿಎಂ ಸಂಚರಿಸುವ ಮುಖ್ಯ ರಸ್ತೆಯಲ್ಲಿನ ಹೊಂಡಗಳಿಗೆ ತರಾತುರಿಯಲ್ಲಿ ಹೊಂಡವನ್ನು ಮುಚ್ಚುವ ಕೆಲಸಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರದಿಂದ ಕಾಶಿಕಟ್ಟೆವರೆಗಿನ ರಸ್ತೆಯಲ್ಲಿರುವ ಹೊಂಡ ಗುಂಡಿಗಳಿಗೆ ತೇಪೆ ಕಾರ್ಯ ಮಾಡಲಾಗಿದೆ. ಅಧಿಕಾರಿಗಳ ಈ ಕಾರ್ಯಕ್ಕೆ ಸ್ಥಳೀಯರಿಂದ ಆಕ್ರೋಶ ವ್ಯಕ್ತವಾಗಿದೆ. ಈ ಹಿಂದೆ ಹಲವು ಬಾರಿ ಸ್ಥಳೀಯರು ಮುಖ್ಯ ರಸ್ತೆ ದುರಸ್ತಿಗಾಗಿ ಹಲವಾರು ಭಾರಿ ಅಧಿಕಾರಿಗಳನ್ನು ಒತ್ತಾಯಿಸಿದ್ರೂ ಜನಸಾಮಾನ್ಯರ ಮನವಿಗೆ ಕ್ಯಾರೆ ಅಂದಿರಲಿಲ್ಲ. ಆದ್ರೆ ನಿರ್ಲಕ್ಷ್ಯ ತೋರಿದ ಇಲಾಖೆ ಇದೀಗ ಸಿಎಂ ಬರ್ತಾರೆ ಎನ್ನುವ ಮಾತ್ರಕ್ಕೆ ಕಳಪೆ ಮಟ್ಟದ ಸಾಮಾಗ್ರಿ ಬಳಸಿ ದುರಸ್ತಿ ಕಾರ್ಯ ನಡೆಸುತ್ತಿದ್ದಾರೆ ಎಂಬುದಾಗಿ ಸ್ಥಳೀಯರು ಆರೋಪಿಸುತ್ತಿದ್ದಾರೆ.