ಬೈಂದೂರು, ಆ 13: ಬೈಂದೂರು ಬಸ್ ನಿಲ್ದಾಣದ ರಾಷ್ಟೀಯ ಹೆದ್ದಾರಿ ಬಳಿ, ಆ 13 ರಂದು ಸೋಮವಾರ ಮುಂಜಾನೆ ಸುಮಾರು 5 ಗಂಟೆಗೆ ಕುಂದಾಪುರ ಕಡೆಯಿಂದ ಭಟ್ಕಳ ಕಡೆಗೆ ಹೋಗುತ್ತಿದ್ದ ಕ್ಯಾಂಟರ್ ವಾಹನವನ್ನು ಖಚಿತ ಮಾಹಿತಿ ಮೇರೆಗೆ ಬೈಂದೂರು ಪೊಲೀಸರು ಅಡ್ಡಗಟ್ಟಿದ್ದು ಪರಿಶೀಲನೆ ನಡೆಸಿದಾಗ, ಅಕ್ರಮವಾಗಿ 20 ಎತ್ತುಗಳನ್ನು ಹಿಂಸಾತ್ಮಾಕವಾಗಿ ಸಾಗಿಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂದ ಭಟ್ಕಳ ಮತ್ತು ದಾವಣಗೆರೆ ಮೂಲದ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.
ಎತ್ತುಗಳನ್ನು ಪೊಲೀಸ್ ಕಂಪೌಂಡ್ ಒಳಗೆ ಕಟ್ಟಿಹಾಕಲಾಗಿದ್ದು, ಈ ವಿಷಯ ಸಾರ್ವಜನಿಕರಿಗೆ ತಿಳಿಯುತ್ತಿದ್ದಂತೆ ವಿವಿಧ ತಳಿಯ ಎತ್ತುಗಳನ್ನು ನೋಡಲು ಪೊಲೀಸ್ ಠಾಣೆಯ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.ಈ ಘಟನೆಗೆ ಸಂಬಂಧಪಟ್ಟಂತೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ