ಉಡುಪಿ, ಆ 13: ಶಿರೂರು ಮಠದ ಲಕ್ಷ್ಮೀವರ ತೀರ್ಥ ಶ್ರೀಪಾದರ ಸಂಶಯಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಶಿರೂರು ಶ್ರೀ ಸಾವನಪ್ಪಿದ ದಿನದಂದೇ ಸತ್ತ ದನದ ಸ್ಯಾಂಪಲ್ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ ಎನ್ನಲಾಗಿದೆ.
ಹಿರಿಯಡ್ಕದ ಸಮೀಪದ ಮೂಲ ಮಠದ ಗೋ ಶಾಲೆಯಲ್ಲಿ ದನವೊಂದು ಶ್ರೀಗಳು ನಿಧರರಾದ ದಿನ ಅಂದರೆ ಜು 19 ಮೃತಪಟ್ಟಿದೆ ಎನ್ನಲಾಗಿದೆ. ಅದನ್ನು ಅಲ್ಲೇ ಸಮೀಪದ ಜಾಗದಲ್ಲಿ ಉಳಲಾಗಿದ್ದು, ಅದನ್ನು ಮೂರು ದಿನಗಳ ಹಿಂದೆ ಪೊಲೀಸ್ ತನಿಖಾಧಿಕಾರಿಗಳ ಸಮ್ಮುಖದಲ್ಲಿ ಹೊರತೆಗೆಯಲಾಗಿದೆ ಎನ್ನಲಾಗುತ್ತಿದೆ. ತಜ್ಞ ವೈಧ್ಯಾಧಿಕಾರಿ ತಂಡ ದನದ ಮಾದರಿ ಅಂಶವನ್ನು ಸಂಗ್ರಹಿಸಿದ್ದು, ಪ್ರಯೋಗಾಲಯಕ್ಕೆ ಕಳುಹಿಸಿರುವ ಸುದ್ದಿಗಳು ಹರಿದಾಡುತ್ತಿವೆ. ಇನ್ನು ಶಿರೂರು ಶ್ರೀಗಳು ಮೃತಪಟ್ತಿರುವ ದಿನವೇ ದನ ಸತ್ತಿರುವುದು ಕಾಕತಾಳೀಯವೂ ಆಗಿರಬಹುದು.