ಮಂಗಳೂರು,ಅ01: ಪ್ರಕ್ಷುಬ್ದಗೊಂಡಿರುವ ಕಡಲಿನಲ್ಲಿ ನೀರಾಟ ಆಡಲು ಇಳಿದು ಅಪಾಯಕ್ಕೆ ಸಿಲಿಕಿದ್ದ ಇಬ್ಬರು ಪ್ರವಾಸಿಗರನ್ನು ಜೀವ ರಕ್ಷಕ ದಳದವರು ರಕ್ಷಿಸಿದ ಘಟನೆ ಪಣಂಬೂರು ಬೀಚ್ ನಲ್ಲಿ ನಡೆದಿದೆ.
ಬೆಂಗಳೂರಿನ ದಾಸರಹಳ್ಳಿ ನಿವಾಸಿಗಳಾದ ಸಾದಿಕ್ ಮತ್ತು ನರಸಿಂಹ ಮೂರ್ತಿ ಎಂಬವರು ಅಪಾಯದಿಂದ ಪಾರಾದವರು..ದಸರಾ ರಜೆಯ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ನಾಲ್ಕು ಮಂದಿ ಗೆಳೆಯರ ತಂಡ ಪ್ರವಾಸಕ್ಕೆಂದು ಮಂಗಳೂರಿಗೆ ಆಗಮಿಸಿದ್ದರು. ಮಂಗಳೂರಿನಲ್ಲಿ ದೇವಾಲಯಗಳನ್ನು ಸುತ್ತಾಡಿ ನಂತರ ಪಣಂಬೂರು ಬೀಚ್ ನಲ್ಲಿ ಆಟವಾಡಲು ತೆರಳಿದ್ದರು ಈ ವೇಳೆ ನೀರಿನ ಸೆಳೆತಕ್ಕೆ ಸಿಲುಕಿದ್ದಾರೆ. ಕೂಡಲೇ ಅಲ್ಲಿದ್ದ ಜೀವರಕ್ಷಕ ದಳದವರು ಇಬ್ಬರನ್ನ ರಕ್ಷಿಸಿದ್ದಾರೆ.