ಕುಂದಾಪುರ, ಆ 12: ಉಳ್ತೂರು ಶ್ರೀ ಮಹಾಲಿಂಗೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಬೇಳೂರು ಮೊಗೆಬೆಟ್ಟು ಮಹಾಬಲ ಆಚಾರ್ಯ (84) ಮತ್ತು ಅವರ ಪತ್ನಿ ಲಲಿತಾ ಆಚಾರ್ಯ (70) ಅವರು ಆ, 10 ರಂದು ನಿಧನ ಹೊಂದಿದ್ದು, ಈ ದಂಪತಿ ದಾಂಪತ್ಯದ ಜತೆಜತೆಗೆ ಸಾವಿನಲ್ಲೂ ಒಂದಾಗಿಯೇ ಸಾಗಿದ್ದಾರೆ.
ಮಹಾಬಲ ಆಚಾರ್ಯ ಅವರು ಆ.10 ರಂದು ಬೆಳಗ್ಗೆ ನಿಧನ ಹೊಂದಿದರು. ಆ ಸಂದರ್ಭ ಅನಾರೋಗ್ಯದಿಂದ ಬಳಲುತ್ತಿದ್ದ ಅವರ ಪತ್ನಿ ಆಸ್ಪತ್ರೆಗೆ ದಾಖಲಾಗಿದ್ದರು. ಪತಿಯ ಸಾವಿನ ಹಿನ್ನಲೆಯಲ್ಲಿ ಅವರನ್ನು ಮನೆಗೆ ಕರೆತರುತ್ತಿರುವಾಗ ಅವರು ಮಾರ್ಗ ಮಧ್ಯೆದಲ್ಲಿಯೇ ಕೊನೆಯುಸಿರೆಳದರು.
ಮಹಾಬಲ ಆಚಾರ್ಯರು ಹಲವು ವರ್ಷ ಶಿಕ್ಷಕರಾಗಿ ಸೇವೆ ಸಲ್ಲಿಸಿ ಆದರ್ಶ ಅಧ್ಯಾಪಕರಾಗಿ ಗುರುತಿಸಿಕೊಂಡಿದ್ದರು ಹಾಗೂ ಅಪಾರ ಶಿಷ್ಯರನ್ನು ಹೊಂದಿದ್ದರು. ದಂಪತಿ ಐವರು ಪುತ್ರರು ಹಾಗೂ ಐವರು ಪುತ್ರಿಯರನ್ನು ಅಗಲಿದ್ದಾರೆ.