ಮಂಜೇಶ್ವರ, ಆ 12: ಗಂಟಲಲ್ಲಿ ಅನ್ನ ಸಿಲುಕಿದ ಪರಿಣಾಮ ಮಹಿಳೆಯೊಬ್ಬಳು ಮೃತಪಟ್ಟ ಘಟನೆ ಗೇರುಕಟ್ಟೆಯ ಪಾವೂರುಪಾದೆ ಹೌಸ್ ನ ಬಳಿ ನಡೆದಿದೆ. ಮೃತ ಮಹಿಳೆಯನ್ನು ಸ್ಥಳೀಯ ನಿವಾಸಿ ನಾರಾಯಣ ಎಂಬವರ ಪುತ್ರಿ ಪ್ರೇಮಾವತಿ (30) ಎಂದು ಗುರುತಿಸಲಾಗಿದೆ.
ಗುರುವಾರ ರಾತ್ರಿ ಅವರಿಗೆ ಉಸಿರುಗಟ್ಟಿದಂತಾಗಿದ್ದು, ಮೂಗಿನಲ್ಲಿ ನೊರೆ ಕಂಡುಬಂದಿತ್ತು. ಕೂಡಲೇ ಉಪ್ಪಳದ ಖಾಸಗಿ ಆಸ್ಪತ್ರೆಗೆ ಸಾಗಿಸಿದರೂ ಆ ವೇಳೆಗೆ ಮೃತಪಟ್ಟರು. ಮರಣೋತ್ತರ ಪರೀಕ್ಷೆ ನಡೆಸಿದಾಗ ಶ್ವಾಸನಾಳದಲ್ಲಿ ಅನ್ನ ಸಿಲುಕಿದ್ದರಿಂದ ಸಾವು ಸಾಂಭವಿಸಿದೆ ಎಂದು ತಿಳಿದುಬಂದಿದೆ. ಮಂಜೇಶ್ವರ ಪೊಲೀಸರು ಪ್ರಕರಣ ದಾಕಲಿಸಿದ್ದಾರೆ. ಅವರು ಪತಿ , ಇಬ್ಬರು ಮಕ್ಕಳು, ಹಾಗೂ ತಂದೆ ತಾಯಿಯನ್ನು ಅಗಲಿದ್ದಾರೆ.