ಮಡಿಕೇರಿ, ಅ 1: ಇಲ್ಲಿನ ದಸರಾದ ಸಂಭ್ರಮದ ಮೆರವಣಿಯ ವೇಳೆ ದುಷ್ಕರ್ಮಿಗಳು ದುಷ್ಕೃತ್ಯ ಮೆರೆದಿದ್ದಾರೆ, ಜನಸಮೂಹದ ಮದ್ಯೆಯೇ ಕೊಲೆ ಮಾಡಿದ್ದು ಇದರಿಂದ ಇಡೀ ಮಡಿಕೇರಿಯೇ ಬೆಚ್ಚಿಬಿದ್ದಿದೆ. ಮೆರವಣಿಗೆ ವೇಳೆ ಯುವಕನೊಬ್ಬನನ್ನು ದುಷ್ಕರ್ಮಿಗಳು ಹೊಂಚು ಹಾಕಿ ಬರ್ಬರವಾಗಿ ಇರಿದು ಕೊಲೆಗೈದಿದ್ದಾರೆ. ರಾಜೇಶ್ವರಿ ನಗರದ ನಿವಾಸಿ ಚಂದ್ರಶೇಖರ್( 26 ) ಹತ್ಯೆಗೀಡಾದ ವ್ಯಕ್ತಿ. ವೃತ್ತಿಯಲ್ಲಿ ಆಟೋ ಚಾಲಕನಾಗಿರುವ ಈತನನ್ನು ಭಾನುವಾರ ನಸುಕಿನ 2.30 ರ ವೇಳೆ ಹೊಂಚು ಹಾಕಿ ಇರಿದು ಹತ್ಯೆಗೈಯಲಾಗಿದೆ. ದಶ ಮಂಟಪ ಆಚರಣೆ ನಡೆಯುತ್ತಿದ್ದ ವೇಳೆ ಕನ್ನಿಕಾ ಪರಮೇಶ್ವರಿ ದೇಗುಲದ ಬಳಿ ಘಟನೆ ನಡೆದಿದ್ದು , ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು , ದುಷ್ಕರ್ಮಿಗಳಿಗೆ ಬಲೆ ಬೀಸಿದ್ದಾರೆ.