ಮಂಗಳೂರು, ಅ 10: ಕರಾವಳಿ ಜನತೆಯ ಪಾಲಿಗೆ ಪವಾಡಗಳ ಸಂತನೆಂದೇ ಪ್ರಸಿದ್ಧಿಯನ್ನು ಪಡೆದಿರುವ ಬೋಂದೆಲ್ ಸಂತ ಲಾರೆನ್ಸ್ ಪುಣ್ಯ ಕ್ಷೇತ್ರದ ವಾರ್ಷಿಕ ಮಹೋತ್ಸವ ಸಂಪನ್ನಗೊಂಡಿದೆ. ಇಂದು ವಾರ್ಷಿಕ ಮಹೋತ್ಸ ವಿಜೃಂಭನೆಯಿಂದ ಜರಗಿತು. ಸಂಜೆ ೬ ಗಂಟೆಗೆ ಹಬ್ಬದ ಪ್ರಧಾನ ಬಲಿಪೂಜೆ ನಡೆಯಿತು. ಮಂಗಳೂರು ಧರ್ಮಪ್ರಾಂತ್ಯದ ನಿಯೋಜಿತ ಬಿಷಪ್ ವಂ. ಡಾ. ಪೀಟರ್ ಪಾವ್ಲ್ ಸಲ್ಡಾನಾ ದಿವ್ಯ ಬಲಿಪೂಜೆ ನೆರವೇರಿಸಿದರು. “ಸಂತ ಲಾರೆನ್ಸ ಯೇಸು ಕ್ರೀಸ್ತರ ಬೋಧನೆಗೆ ಅನುಸಾರವಾಗಿ ನಡೆದು ಕ್ರೈಸ್ತರ ಪಾಲಿಗೆ ಪರಮೋಚ್ಚ ಸಂತನಾದರು. ಅವರ ಆದರ್ಶಗಳನ್ನು ನಾವು ಪಾಲಿಸೋಣ” ಎಂದು ವಂ. ಡಾ. ಪೀಟರ್ ಪಾವ್ಲ್ ಸಲ್ಡಾನಾ ಹಬ್ಬದ ಸಂದೇಶ ನೀಡಿದರು.
ಇನ್ನು ಈ ಬಲಿಪೂಜೆಯಲ್ಲಿ ಪುಣ್ಯಕ್ಷೇತ್ರದ ಪ್ರಧಾನ ಧರ್ಮಗುರು ವಂ. ಆಂಡ್ರ್ಯು ಲಿಯೋ ಡಿಸೋಜ, ವಂ. ಲಿಯೋ ವೇಗಸ್ ಸೇರಿದಂತೆ ೧೦ಕ್ಕೂ ಅಧಿಕ ಧರ್ಮಗುರುಗಳು ಹಾಗೂ ಧರ್ಮಭಗಿಣಿಯರು ಭಾಗವಹಿಸಿದ್ದರು. ಸಾವಿರಾರು ಭಕ್ತಾಧಿಗಳು ಬಲಿಪೂಜೆಯಲ್ಲಿ ಭಾಗವಹಿಸಿ ತಮ್ಮ ಪ್ರಾರ್ಥನೆಗಳನ್ನು ಸಂತರ ಪಾದಗಳಿಗೆ ಸಮರ್ಪಿಸಿದರು. ಬಲಿಪೂಜೆಯಲ್ಲಿ ಭಕ್ತಾಧಿಗಳಿಗಾಗಿ ವಿಶೇಷ ಪ್ರಾರ್ಥನೆ ನಡೆಯಿತು.
ಶಾಸಕ ಉಮಾನಾಥ್ ಕೊಟ್ಯಾನ್ ರಿಂದ ಸಮಾರೋಪ:
ಇನ್ನು ಸಮಾರೋಪ ಸಮಾರಂಭದಲ್ಲಿ ಮೂಲ್ಕಿ-ಮೂಡುಬಿದಿರೆ ಶಾಸಕ ಉಮ್ಮನಾಥ್ ಕೋಟ್ಯಾನ್ ಭಾಗವಹಿಸಿದ್ದರು.
ನೊವೆನಾ ಪ್ರಾರ್ಥನೆಗಳು ಆರಂಭಿಸಿದ ದಿನವಾದ ಆಗಸ್ಟ್ ೧ರಂದು ಏರಿಸಿದ್ದ ಸಂ. ಲಾರೆನ್ಸರ ಧ್ವಜವನ್ನು ಇಳಿಸುವ ಮೂಲಕ ಸಂಭ್ರಮವನ್ನು ಸಮಾರೋಪಗೊಳಿಸಿದರು.