ಬೆಳ್ತಂಗಡಿ, ಅ 1: ಮರ ಕದ್ದ ಆರೋಪದಲ್ಲಿ ಪುದುವೆಟ್ಟು ನಿವಾಸಿ ಕಮಲದಾಸ್ ಎಂಬವರ ಮೇಲೆ ಹಿಗ್ಗಾ ಮುಗ್ಗ ಹಲ್ಲೆ ನಡೆಸಿದ ಉಜಿರೆ ವಲಯ ಅರಣ್ಯಾಧಿಕಾರಿ ಕೀರ್ತನ್ ಶೆಟ್ಟಿ ವಿರುದ್ದ ಸಹಾಯಕ ಅರಣ್ಯ ಸಂರಕ್ಷಾಣಾಧಿಕಾರಿ ಸತೀಶ್ ಬಾಬಾ ರೈ, ಶನಿವಾರ ವಿಚಾರಣೆ ನಡೆಸಿದರು. ಇದೇ ವೇಳೆ ಕಚೇರಿಗೆ ನೂರಾರು ಮಂದಿ ಮುತ್ತಿಗೆ ಹಾಕುವ ಪ್ರಯತ್ನವನ್ನು ಮಾಡಿದರು ಆದರೆ ಸ್ಥಳಕ್ಕೆ ಆಗಮಿಸಿದ ಬೆಳ್ತಂಗಡಿ ಪೊಲೀಸರು ಪರಿಸ್ಥಿತಿ ಹತೋಟಿಗೆ ತಂದರು. ನ್ಯಾಯಕ್ಕಾಗಿ ವಿನಂತಿಸಿದ ಕಮಲ್ ದಾಸ್ ಕುಟುಂಬ ತಕ್ಷಣ ಕೀರ್ತನ್ ಶೆಟ್ಟಿಯನ್ನು ವಜಾಗೊಳಿಸಬೇಕೆಂದು ಆಗ್ರಹಿಸಿದರು. ಇದಕ್ಕೆ ಸ್ಪಂದಿಸಿದ ಸಹಾಯಕ ಅರಣ್ಯ ಸಂರಕ್ಷಾಣಾಧಿಕಾರಿ ಸತೀಶ್ ವಜಾಗೊಳಿಸುವ ಅಧಿಕಾರ ನನಗಿಲ್ಲ ,ಈ ಬಗ್ಗೆ ಬಂದಿರುವ ದೂರು ಹಾಗೂ ತನಿಖೆ ವೇಳೆ ದೊರೆತ ಮಾಹಿತಿಯನ್ನು ಕ್ರೋಡಿಕರಿಸಿ ವರದಿಯನ್ನು ಮೇಲಾಧಿಕಾರಿಗೆ ನೀಡುತ್ತೇನೆ ಎನ್ನುವ ಭರವಸೆ ಇತ್ತರು.
ಇನ್ನೊಂದೆಡೆ ಲಂಚಕೋರ ಕೀರ್ತನ್ ಶೆಟ್ಟಿಯ ಅವರನ್ನು ಅಮಾನತುಗೊಳಿಸಬೇಕೆಂದು ಒತ್ತಾಯಿಸಿ ವಿವಿಧ ಸಂಘಟನೆಗಳು, ಅ ೩ ರಂದು ಬೃಹತ್ ಪ್ರತಿಭಟನೆಯ ಎಚ್ಚರಿಕೆಯನ್ನು ನೀಡಿದೆ.