ಉಡುಪಿ,ಅ 1 : ವಿವಾಹ ಎಂದರೆ ಸಂಭ್ರಮ. ಈ ಸಂಭ್ರಮವನ್ನು ನೆನಪಿನಲ್ಲಿರಿಸಿಕೊಳ್ಳಲು ತಮ್ಮ ತಮ್ಮ ವಿವಾಹವನ್ನು ವಿಶೇಷವಾಗಿ ಆಚರಿಸಿಕೊಳ್ಳಲು ನವ ಜೋಡಿಗಳು ಮುಂದಾಗುತ್ತಾರೆ. ಅದರಂತೆಯೇ ಇಲ್ಲಿನ ಮಂಜುನಾಥ ವಿ ಮತ್ತು ಅಂಬಿಕಾ ಎಸ್ ಪ್ರಾಚೀನ ಭೌದ್ದ ಸಂಪ್ರದಾಯದಂತೆ ವಿವಾಹವಾಗಿ ಹೊಸ ಜೀವನಕ್ಕೆ ಕಾಲಿರಿಸಿದ್ದಾರೆ.
ಉಡುಪಿ ಕಿದಿಯೂರು ಖಾಸಗಿ ಹೋಟೆಲಿನಲ್ಲಿ ರವಿವಾರ ನಡೆದ ವಿಶಿಷ್ಟ ಮಹೋತ್ಸವದಲ್ಲಿ ಉಡುಪಿ ಕೆಳಾರ್ಕಳಬೆಟ್ಟು ವಿಷ್ಣುಮೂರ್ತಿ ನಗರದ ವಾಸು ಮೇಸ್ತ್ರಿ ಹಾಗೂ ಸುಶೀಲಾ ದಂಪತಿಯ ಪುತ್ರ ಮಂಜುನಾಥ್ ಹಾಗೂ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸುರೇಶ್ ಹಾಗೂ ಪಾರ್ವತಿ ದಂಪತಿಯ ಪುತ್ರಿ ಅಂಬಿಗಾ ಎಂಬವರು ಸತಿಪತಿಗಳಾಗಿ ಹಸೆ ಮಣೆ ಏರಿದರು. ಇವರಿಬ್ಬರ ವಿವಾಹಕ್ಕೆ ನೂರಾರು ಮಂದಿ ಸಾಕ್ಷಿಗಳಾಗಿ ವಧು ವರರನ್ನು ಆರ್ಶೀವದಿಸಿದ್ರು. ವರ ಮಂಜುನಾಥ್ ಅವರು ಉಡುಪಿಯಲ್ಲಿ ವೃತ್ತಿಯಲ್ಲಿ ವಕೀಲರಾಗಿ ದುಡಿಯುತ್ತಿದ್ದು ಹಲವು ವರ್ಷಗಳಿಂದ ದಲಿತ ಹೋರಾಟದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇವರು ೨೦೧೪ ರಲ್ಲಿ ಭೌದ್ದ ದೀಕ್ಷೆಯನ್ನು ಸ್ವೀಕರಿಸಿದ್ದರು. ಆದ್ರೆ ಮದುಮಗಳು ಹಾಗೂ ಅವರ ಮನೆಯವರು ರವಿವಾರ ನೂರಾರು ಮಂದಿಯ ಮುಂದೆ ಭೌದ್ದ ಧರ್ಮದ ದೀಕ್ಷೆಯನ್ನು ಸ್ವೀಕರಿಸಿದ್ರು. ದಕ್ಷಿಣ ಕನ್ನಡ ಜಿಲ್ಲಾ ಭೌದ್ದ ಮಹಾಸಭಾದ ಬ್ರಹ್ಮಚಾರಿ ಎಸ್ ಆರ್ ಲಕ್ಷ್ಮಣ್ ಅವರ ಪೌರೋಹಿತ್ಯದ ಮೂಲಕ ಈ ವಧು ವರರ ವಿವಾಹ ನೆರವೇರಿತು