ಮಂಗಳೂರು, ಆ 08: ಯುವಕನೋರ್ವ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಆಗಸ್ಟ್ ೦೮ ರ ಬುಧವಾರ ಮಧ್ಯಾಹ್ನ ನೇತ್ರಾವತಿ ಸೇತುವೆ ಬಳಿ ನಡೆದಿದೆ. ಟೀ ಶರ್ಟ್ ಹಾಗೂ ಬ್ಯಾಗ್ ಧರಿಸಿದ್ದ ಪಾದಚಾರಿಯೊಬ್ಬ ಇದ್ದಕ್ಕಿದ್ದಂತೆ ನದಿಗೆ ಹಾರಿದ ಎಂದು ಪ್ರತ್ಯಕ್ಷದರ್ಶಿ ಮಹಿಳೆಯೊಬ್ಬರು ತಿಳಿಸಿದ್ದಾರೆ. ಯುವಕನ ಗುರುತು ಪತ್ತೆಯಾಗಿಲ್ಲ. ಘಟನೆಯ ಬಳಿಕ ಸಾರ್ವಜನಿಕರು, ವಾಹನ ಸವಾರರು ಸೇತುವೆಯಲ್ಲೇ ನಿಂತ ಕಾರಣ ಕೆಲಕಾಲ ಸಂಚಾರಕ್ಕೆ ತೊಡಕುಂಟಾಗಿತ್ತು. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ.