ಕಡಬ, ಆ 07 : ಪಿಕಪ್ ವಾಹನವೊಂದರಲ್ಲಿ ಅಕ್ರಮವಾಗಿ ಮರ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಬೇಧಿಸಿರುವ ಕಡಬ ಪೊಲೀಸರು ಪಿಕಪ್ ಸಹಿತ ಮರದ ತುಂಡುಗಳನ್ನು ವಶಪಡಿಸಿಕೊಂಡಿರುವ ಘಟನೆ ಕಡಬ ಠಾಣಾ ವ್ಯಾಪ್ತಿಯ ರಾಮಕುಂಜದಲ್ಲಿ ನಡೆದಿದೆ.
ಪಿಕಪ್ ವಾಹನದಲ್ಲಿ ಅಕ್ರಮವಾಗಿ ಮರ ಸಾಗಾಟ ಮಾಡಲಾಗುತ್ತಿದೆ ಎನ್ನುವ ಖಚಿತ ಮಾಹಿತಿಯ ಮೇರೆಗೆ ಎಎಸ್ಐ ಕೊರಗಪ್ಪ, ಹೆಡ್ ಕಾನ್ಸ್ಟೇಬಲ್ ಮೋಹನ ಹಾಗೂ ಸಿಬ್ಬಂದಿಗಳು ತಪಾಸಣೆಗೆ ನಿಂತಿದ್ದ ವೇಳೆ ಬಂದ ಆರೋಪಿಗಳು ಪೊಲೀಸರನ್ನು ನೋಡಿ ವಾಹನವನ್ನು ಮುಂದೆ ಕೊಂಡುಹೋಗಿ ನಿಲ್ಲಿಸಿ ಪರಾರಿಯಾಗಿದ್ದಾರೆ. ಪಿಕಪ್ ವಾಹನವನ್ನು ಪರಿಶೀಲಿಸಿದಾಗ ಅದರಲ್ಲಿ ವಿವಿಧ ಜಾತಿಯ ಮರದ ಸುಮಾರು 38 ಲಾಗ್ ಗಳು ಕಂಡು ಬಂದಿದ್ದು, ಸುಮಾರು 25000 ರೂ ಮೌಲ್ಯದ ಮರ ಹಾಗೂ ಪಿಕಪ್ ವಾಹನವನ್ನು ವಶಪಡಿಸಿಕೊಳ್ಳಲಾಗಿದ್ದು ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.