ಮಂಗಳೂರು, ಅ 1 : ಸಮುದ್ರದ ಪಾಲಾಗುತ್ತಿದ್ದ ಪ್ರವಾಸಿಗರನ್ನು ಇಲ್ಲಿನ ಪಣಂಬೂರು ಬೀಚ್ ನಲ್ಲಿ ಶನಿವಾರ ಸಂಜೆ ರಕ್ಷಣೆ ಮಾಡಲಾಗಿದೆ.
ಬೆಂಗಳೂರಿನಿಂದ ಪ್ರವಾಸಕ್ಕಾಗಿ ಬಂದಿದ್ದ ಸ್ನೇಹಿತರ ಗುಂಪು ಸಮುದ್ರಕ್ಕೆ ಇಳಿದು ಮೋಜು ಮಸ್ತಿಯ ಸಂದರ್ಭದಲ್ಲಿ ಈ ಅವಘಡ ನಡೆದಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಹತ್ತು ಮಂದಿ ಇದ್ದ ತಂಡದಲ್ಲಿ ದೀಪಕ್ (21) ಹಾಗೂ ಪ್ರಕಾಶ್ (21) ರಕ್ಷಿಸಲ್ಪಟ್ಟ ಪ್ರವಾಸಿಗರು. ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ಕೊಚ್ಚಿ ಹೋಗುತ್ತಿದ್ದ ಸ್ನೇಹಿತರಿಗಾಗಿ ಪ್ರವಾಸಿಗರು ಕೂಗಿಕೊಂಡಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಲೈಫ್ ಗಾರ್ಡ್ ಗಳು ಯುವಕರನ್ನು ರಕ್ಷಿಸಿದ್ದಾರೆ.