ಕುಂದಾಪುರ, ಆ 03: ಮೂಗಿ ಯುವತಿಯನ್ನು ವಿವಾಹವಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ ಆರೋಪ ಸಾಬೀತಾಗಿದ್ದು, ಮಂಡ್ಯ ಕೆ.ಆರ್.ಪೇಟೆ ಮೂಲದ ಯೋಗೀಶ್ (25) ಎಂಬಾತನನ್ನು ಕುಂದಾಪುರ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ತಪ್ಪಿತಸ್ಥನೆಂದು ಪರಿಗಣಿಸಿ, ಶಿಕ್ಷೆ ವಿಧಿಸಿದೆ. ಅಪರಾಧಿಗೆ ನ್ಯಾಯಾಧೀಶ ಪ್ರಕಾಶ್ ಖಂಡೇರಿ , 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗು 50 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ. 2015 ರಲ್ಲಿ ಕುಂದಾಪುರ ಯಡ್ತರೆಯಲ್ಲಿ ಪ್ರಕರಣ ನಡೆದಿತ್ತು.
ಕುಂದಾಪುರ ಯಡ್ತರೆ ಸಮೀಪದ ರೆಸಾರ್ಟ್ಸ್ ನಲ್ಲಿ ಯೋಗೀಶ್ ಹಾಗೂ ಸಂತ್ರಸ್ತೆ ಮೂಗಿ ಯುವತಿ ಕೆಲಸ ಮಾಡುತ್ತಿದ್ದು, ಈ ಸಂದರ್ಭದಲ್ಲಿ ವಿವಾಹವಾಗುವುದಾಗಿ ನಂಬಿಸಿ ಮೋಸ ಮಾಡಿದ್ದ ಯೋಗೀಶ್ ಯುವತಿಯ ಮೇಲೆ ಅತ್ಯಾಚಾರವೆಸಗಿದ್ದ.