ಕಾಸರಗೋಡು, ಆ 03: ರಾತ್ರಿ ಮನೆಯಿಂದ ನಗದು ಕಳವು ಮಾಡಿದ ಕಳ್ಳ ತಾನು ಕೊಂಡೊಯ್ದ ಮಾಲುಗಳನ್ನು ಶೀಘ್ರ ಹಿಂದಿರುಗಿಸುವುದಾಗಿ ಮನೆ ಗೋಡೆಯಲ್ಲಿ ಬರೆದು ಪರಾರಿಯಾದ ಸ್ವಾರಸ್ಯಕರ ಘಟನೆ ನಡೆದಿದೆ.
ಹೊಸದುರ್ಗ ತಾಲೂಕಿನ ಉದಿನೂರು ಜುಮ್ಮ ಮಸೀದಿ ಬಳಿಯ ಸಿ.ಕೆ ಮುನೀರಾ ಎಂಬವರ ಮನೆಯ ಬೀಗ ಮುರಿದು ಒಳನುಗ್ಗಿದ ಕಳ್ಳ ಮಲಗುವ ಕೊಠಡಿಯೊಳಗಿದ್ದ ಕಪಾಟಿನಿಂದ ಎರಡು ಪವನಿನ ಚಿನ್ನದೊಡವೆ ಮತ್ತು 32,000 ರೂ. ನಗದು ಕಳವು ಗೈದಿದ್ದಾನೆ. ಈ ಸಂದರ್ಭ ಮನೆಯವರು ಸಂಬಂಧಿಕರೋರ್ವರ ಮನೆಗೆ ಹೋಗಿದ್ದರು. ಅಲ್ಲಿಂದ ಮರುದಿನ ಹಿಂತಿರುಗಿದಾಗಲೇ ಕಳವು ನಡೆದ ವಿಚಾರ ಬೆಳಕಿಗೆ ಬಂದಿದ್ದು.
ಅವರ ಮನೆಯಿಂದ ಎರಡು ಪವನ್ ನ ಚಿನ್ನದೊಡವೆ ಹಾಗೂ 32 ಸಾವಿರ ರೂಪಾಯಿ ಕಳವುಗೈದು ಮನೆಯ ಗೋಡೆಯಲ್ಲಿ ’ಹಣ ಅತ್ಯಗತ್ಯವಿರುವುದರಿಂದಾಗಿ ನಾನು ತೆಗೆದಿದ್ದೇನೆ, ಅದನ್ನು ನಾನು ಶೀಘ್ರದಲ್ಲೇ ಹಿಂದಿರುಗಿಸುವೆ ನಾನು ಕಳ್ಳನಲ್ಲ ’ ಎಂದು ಗೋಡೆಯಲ್ಲಿ ಪೆನ್ಸಿಲ್ನಿಂದ ಬರೆದು ಹೋಗಿದ್ದಾನೆ.