ಬಂಟ್ವಾಳ, ಆ 01: ಕೆ.ಎಸ್.ಆರ್.ಟಿ.ಸಿ.ಡಿಪೋ ಗೆ ಮಂಗಳೂರು ಎ.ಸಿ.ಬಿ.ಪೋಲಿಸರಿಂದ ದಿಡೀರ್ ದಾಳಿ ನಡೆದಿದೆ. ಬಿಸಿರೋಡು ಕೈಕಂಬ ದಲ್ಲಿರುವ ಕೆ.ಎಸ್.ಆರ್.ಟಿ.ಸಿ.ಬಸ್ ಡಿಪೋಗೆ ಸಿಬ್ಬಂದಿ ಯೊರ್ವರ ದೂರಿನಹಿನ್ನಲೆಯಲ್ಲಿ ಈ ದಾಳಿ ನಡೆದಿದೆ.
ಕೆ.ಎಸ್.ಆರ್.ಟಿ.ಸಿ.ಡಿಪೋಗಳಲ್ಲಿ ಹಣಕಾಸಿನ ಅವ್ಯವಹಾರ ಮತ್ತು ಲಂಚಾವತಾರ ತಾಂಡವಾಡುತ್ತಿದೆ ಎಂದು ಮೈಸೂರು ಘಟಕದ ಕೆ.ಎಸ್.ಅರ್.ಟಿ.ಸಿ.ಸಿಬ್ಬಂದಿ ಫಾರೂಕ್ ಖಾನ್ ಕೆ ಅವರು ಎ.ಸಿ.ಬಿ.ಗೆ ದೂರು ನೀಡಿದ ಹಿನ್ನೆಲೆಯಲ್ಲಿ ಆಗಸ್ಟ್ 01 ರಂದು ಮಂಗಳೂರು ಮತ್ತು ಇಂದು ಬೆಳಿಗ್ಗೆ ಬಂಟ್ವಾಳ ಕೆ.ಎಸ್.ಆರ್.ಟಿ.ಸಿ.ಡಿಪೋ ಗೆ ದಾಳಿ ನಡೆಸಿ ಚಾಲಕ ಮತ್ತು ನಿರ್ವಾಹಕ ರನ್ನು ತನಿಖೆ ನಡೆಸಿ ನಗದು ಶಾಖೆಯಲ್ಲಿ ಹಣಕಾಸಿನ ಅವ್ಯವಹಾರ ಮತ್ತು ಲಂಚಾವತಾರ ದ ಬಗ್ಗೆ ದಾಖಲೆಗಳನ್ನು ಪರಿಶೀಲನೆ ನಡೆಸಿ ತನಿಖೆ ಯನ್ನು ಮುಂದುವರಿಸಿದ್ದಾರೆ. ಎಡಿಜಿಪಿ, ಎಸಿಬಿ ನಿರ್ದೇಶನ ದಂತೆ ಪಶ್ಚಿಮ ವಲಯ ಎಸಿಬಿ ಎಸ್.ಪಿ.ಶ್ರತಿ ಡಿವೈಎಸ್ ಪಿ .ಸುದೀರ್ ಹೆಗ್ಡೆ ನೇತೃತ್ವದಲ್ಲಿ ಪೋಲೀಸ್ ಇನ್ಸ್ ಪೆಕ್ಟರ್ ಯೋಗೀಶ್ ಕುಮಾರ್ ಹಾಗೂ ಸಿಬ್ಬಂದಿ ಗಳು ಕಾರ್ಯಚರಣೆ ನಡೆಸಿದ್ದಾರೆ.