ಮಂಗಳೂರು, ಆ 01 : ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಜು 31 ರ ಮಂಗಳವಾರ ರಾತ್ರಿ ದುಬೈಗೆ ಪ್ರಯಾಣಿಸಬೇಕಾಗಿದ್ದ, ಸ್ಪೈಸ್ ಜೆಟ್ ವಿಮಾನವೂ ವಿಮಾನ ನಿಲ್ದಾಣದಲ್ಲಿ ಬಾಕಿಯಾಗಿದೆ. ಪೈಲಟ್ಗೆ ಅನಾರೋಗ್ಯ ಕಾಡಿದ ಹಿನ್ನಲೆಯಲ್ಲಿ ಪ್ರಯಾಣವನ್ನು ಮುಂದೂಡಲಾಗಿದೆ ಎಂದು ಸ್ಪೈಸ್ ಜೆಟ್ ಕಂಪನಿಯೂ ಪ್ರಯಾಣಿಕರಿಗೆ ತಿಳಿಸಿದೆ.
188 ಪ್ರಯಾಣಿಕರು ಈ ವಿಮಾನದಲ್ಲಿ ಪ್ರಯಾಣಿಸಬೇಕಾಗಿದ್ದು, ಪ್ರಯಾಣ ಮುಂದೂಡಿದ ಕಾರಣ ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಯಾಣಿಕರಿಗೆ ಉಳಿದುಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿದ್ದು ಆಗಸ್ಟ್ 1 ರ ಇಂದು ಸಂಜೆ 5.30ಕ್ಕೆ ಇವರೆಲ್ಲರಿಗೂ ಮರು ಪ್ರಯಾಣ ವ್ಯವಸ್ಥೆ ಕಲ್ಪಿಸಿದೆ ಎಂದು ನಿಲ್ದಾಣದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.