ಮಂಗಳೂರು, ಆ 01: ಮಂಗಳೂರು ರಿಫೈನರಿ ಅಂಡ್ ಪೆಟ್ರೊಕೆಮಿಕಲ್ ಲಿಮಿಟೆಡ್ (ಎಂಆರ್ ಪಿಎಲ್)ನಿಂದ ಎಮ್ ಪಿ ಟಿ ಗೆ ತೈಲ ಸರಬರಾಜು ಮಾಡುವ ಭೂಮಿಯಡಿಯ ತೈಲ ಕೊಳವೆಯಲ್ಲಿ ಸೋರಿಕೆ ಉಂಟಾಗಿದೆ. ಕಚ್ಚಾ ತೈಲವು ಕಳೆದ ಹಲವು ದಿನಗಳಿಂದ ಸೋರುತ್ತಿದ್ದು, ಕಂಪನಿಯ ಬೇಜಾವಬ್ದಾರಿತನಕ್ಕೆ ಸ್ಥಳೀಯರು ಅಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ಎಸ್ ಝಡ್ ರಸ್ತೆಯ ಜೋಕಟ್ಟೆಯ ಬಳಿಯಿರುವ ಅದಾನಿ ಕಂಪನಿ ಸನಿಹದಲ್ಲಿರುವ ಕೊಳವೆಯಿಂದ ತೈಲ ಸೋರಿಕೆಯಾಗಿ ಹೊರಬರುತ್ತಿದ್ದು, ಮಳೆ ಕಡಿಮೆಯಾದ ಕಾರಣ ಎರಡು ದಿನದ ಹಿಂದೆ ಸೋರಿಕೆ ಸ್ಥಳೀಯ ಗಮನಕ್ಕೆ ಬಂದಿದೆ. ಸೋರಿಕೆಯಾದ ತೈಲವೂ ಪಲ್ಗುಣಿ ನದಿಗೆ ಸೇರಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ ಸ್ಥಳೀಯರು, ಈವರೆಗೆ ಕಂಪನಿಗೆ ಸೋರಿಕೆ ಪಾಯಿಂಟ್ ಪತ್ತೆ ಮಾಡಲು ಸಾಧ್ಯವಾಗದೇ ಇರುವುದರ ಬಗ್ಗೆ ಕಂಪನಿ ಅಧಿಕಾರಿಗಳ ಬೇಜವಬ್ದಾರಿತನಕ್ಕೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.