ಆ 01: ಸಬ್ಸಿಡಿ ರಹಿತ ಅಡುಗೆ ಅನಿಲ (ಎಲ್ ಪಿಜಿ) ಸಿಲಿಂಡರ್ ದರ1.76 ರೂ ಹೆಚ್ಚಳವಾಗಿದ್ದು, ಮಂಗಳವಾರ ಮಧ್ಯರಾತ್ರಿಯಿಂದಲೇ ಪರಿಷ್ಕೃತ ದರ ಜಾರಿಗೆ ಬಂದಿದೆ. ಪರಿಣಾಮ ದಿಲ್ಲಿಯಲ್ಲಿ ಸಿಲಿಂಡರ್ ದರ 498.02 ರೂ ಆಗಲಿದೆ ಈವರೆಗೆ ಇದು 496.26 ಆಗಿತ್ತು ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಹೇಳಿದೆ.
ತೆರಿಗೆ ನಿಯಮಗಳ ಪ್ರಕಾರ ಎಲ್ ಪಿಜಿ ಮೇಲಿನ ಜಿಎಸ್ ಟಿ ಯನ್ನು ಇಂಧನದ ಮಾರುಕಟ್ಟೆ ದರದಲ್ಲಿ ಲೆಕ್ಕ ಹಾಕಲಾಗುತ್ತದೆ. ಹೀಗಾಗಿ ದರದಲ್ಲಿ ಸ್ವಲ್ಪಮಟ್ಟಿಗೆ ಏರಿಕೆ ಮಾಡಲಾಗಿದೆ ಎಂದು ಐಒಸಿ ತಿಳಿಸಿದೆ. ಈ ಹಿಂದೆ ಜು.1 ರಂದು ಎಲ್ ಪಿ ಜಿ ದರ 2.71 ಏರಿಕೆ ಮಾಡಲಾಗಿತ್ತು.