ಜು 31: ಸಿಎಂ ಕುಮಾರಸ್ವಾಮಿ ಒಡೆದಾಳುವ ನೀತಿಯನ್ನ ಅನುಸರಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ. ಕರ್ನಾಟಕ ಏಕೀಕರಣವಾದ ಬಳಿಕ ರಾಜ್ಯದ ಯಾವ ಮುಖ್ಯಮಂತ್ರಿಯೂ ಕರ್ನಾಟಕದಲ್ಲಿ ಇಂತಹ ಹೇಳಿಕೆ ನೀಡಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕವನ್ನು ಇಬ್ಬಾಗ ಮಾಡಲು ಹೊರಟಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಮೊದಲಿಗೆ ಪ್ರತಿಭಟನಾ ಸ್ಥಳಕ್ಕೆ ತೆರಳಿ ಅವರ ಮನವೊಲಿಸಲು ಪ್ರಯತ್ನ ಮಾಡಬೇಕು ಎಂದು ಒತ್ತಾಯಮಾಡಿದರು. ರಾಜ್ಯಕ್ಕೆ ಅನ್ನ ಕೊಡುತ್ತಿರುವುದು ಉತ್ತರ ಕರ್ನಾಟಕ ಅನ್ನುವುದನ್ನು ಮರೆಯಬಾರದು , ರಾಜ್ಯಕ್ಕೆ ಬೆಳಕು ನೀಡುವುದು ಕಾರವಾರ. ಆದರೆ ಬಜೆಟ್ನಲ್ಲಿ ಆಲಮಟ್ಟಿ ನೀರಾವರಿ ಯೋಜನೆಗೆ ಹಣ ನೀಡಿಲ್ಲ ಅಂತಾನೂ ಆರೋಪಿಸಿದರು. ಹೋರಾಟ ಮಾಡುವುದು ತಪ್ಪಲ್ಲ ಆದ್ರೆ ಪ್ರತ್ಯೇಕತೆಗೆ ಹೋರಾಟ ಮಾಡುವುದು ಸರಿಯಲ್ಲ ಎಂದು ಬೆಳಗಾವಿಯಲ್ಲಿ ಸುವರ್ಣ ಸೌಧದ ಮುಂದೆ ಪ್ರತಿಭಟನೆ ಮಾಡುತ್ತಿರುವ ಪ್ರತಿಭಟನಾಕಾರರಲ್ಲಿ ವಿನಂತಿಸಿದರು.