ಬಂಟ್ವಾಳ, ಜು 30: ತಾಲೂಕಿನ ಪುರಸಭಾ ವ್ಯಾಪ್ತಿಯ ಬಹುಗ್ರಾಮ ಕುಡಿಯುವ ನೀರಿನ ಪೈಪ್ಲೈನ್ ಒಳಚರಂಡಿಯಲ್ಲಿಯೇ ಹಾದುಹೋಗಿದೆ ಎಂದು ಸಂಚಯಗಿರಿ ಹಾಗೂ ಅಜ್ಜಿಬೆಟ್ಟು ನಾಗರಿಕರು ಆರೋಪಿಸಿದ್ದಾರೆ. ಬಂಟ್ವಾಳ ತಾಲೂಕಿನ ಪುರಸಭಾ ವ್ಯಾಪ್ತಿಯ 10-11ನೇ ವಾರ್ಡ್ಗೆ ನೀರು ಪೂರೈಸಲು ಬಹುಗ್ರಾಮದ ಕುಡಿಯುವ ನೀರಿನ ಯೋಜನೆಯಡಿ ಪೈಪ್ಲೈನ್ ಅಳವಡಿಕೆ ಮಾಡಲಾಗಿದೆ.
ಈ ಯೋಜನೆಯ ಪೈಪ್ಲೈನ್ ಕಾಮಗಾರಿಯು ಅವೈಜ್ಞಾನಿಕವಾಗಿದ್ದು, ಕುಡಿಯುವ ನೀರಿನ ಪೈಪ್ಲೈನ್ ಒಳಚರಂಡಿಯಲ್ಲಿ ಹೂತು ಹೋಗಿದೆ. ಇದರಿಂದ ಕುಡಿಯುವ ನೀರಿಗೆ ಡ್ರೈನೇಜ್ ನೀರು ಸೇರುವ ಸಾಧ್ಯತೆ ಇದೆ ಎಂದು ನಾಗರಿಕರು ಆರೋಪಿಸಿದ್ದಾರೆ. ಒಳಚರಂಡಿಯಲ್ಲಿ ಹೂತು ಹೋಗಿರುವ ಪೈಪ್ಲೈನ್ ಅನ್ನು ತೆಗೆದು ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಬೇಕು. ಇಲ್ಲದಿದ್ದರೆ, ಈ ಎರಡು ವಾರ್ಡ್ನ ನಿವಾಸಿಗಳ ಆರೋಗ್ಯದ ದೃಷ್ಠಿಯಿಂದ ಮುಂದಿನಗಳಲ್ಲಿ ಪ್ರತಿಭಟನೆ ಮಾಡಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.