ಉಡುಪಿ, ಜು 30: ಹಣಕಾಸಿನ ವಿಚಾರದಲ್ಲಿ ಹಾಡಹಗಲಲ್ಲೇ ದಾರುಣವಾಗಿ ಮಣಿಪಾಲ ರಿಕ್ರಿಯೇಶನ್ ಕ್ಲಬ್ ಮಾಲಕನ ಕೊಲೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಲ್ಯಾಣಪುರ ನಿವಾಸಿ ರಂಜಿತ್ ಪಿಂಟೋ ಬಂಧಿತ ಆರೋಪಿ.
ರಂಜಿತ್ ಬಂಧನದ ಮೂಲಕ ಪ್ರಕರಣ ಸಂಬಂಧಪಟ್ಟ ಓಟ್ಟು ನಾಲ್ವರು ಆರೋಪಿಗಳನ್ನು ಬಂಧಿಸಿದಂತಾಗಿದೆ. ಆರೋಪಿಗಳನ್ನು ಉಡುಪಿ ಹೆಚ್ಚುವರಿ ಸಿ ವಿಲ್ ನ್ಯಾಯಾಯಲಕ್ಕೆ ಪೋಲಿಸರು ಹಾಜರು ಪಡಿಸಿದ್ದಾರೆ. ಆರೋಪಿಗಳಿಗೆ ಆಗಸ್ಟ್ 2ರ ತನಕ ಪೊಲೀಸ್ ಕಸ್ಟಡಿ ವಿಧಿಸಿ ಕೋರ್ಟ್ ಆದೇಶ ನೀಡಿದೆ. ಇನ್ನು ಹಣಕಾಸಿನ ವಿಚಾರದಲ್ಲಿ ಜುಲೈ 29ರ ರವಿವಾರದಂದು ಮಣಿಪಾಲದ ರಿಕ್ರಿಯೇಶನ್ ಕ್ಲಬ್ ಮಾಲಕ ಗುರು ಪ್ರಸಾದ್ ಭಟ್ ಅವರನ್ನು ಅಪರಿಚಿತ ನಾಲ್ವರ ತಂಡ ಚೂರಿಯಿಂದ ಇರಿದು ಕೊಲೆ ಮಾಡಿತ್ತು. ಕ್ಲಬ್ನಲ್ಲಿ ಆಳವಡಿಸಿರುವ ಸಿಸಿ ಟಿವಿ ಪ್ಯೋಟೇಜ್ನಲ್ಲಿ ಆಗಂತುಕರ ಕೃತ್ಯ ಸೆರೆಯಾಗಿತ್ತು. ಪೋಲಿಸರು ಸಿಸಿ ಟಿವಿ ಪ್ಯೂಟೇಜ್ನ ದೃಶ್ಯಾವಳಿಯನ್ನು ಆಧಾರವಾಗಿಟ್ಟುಕೊಂಡು ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ. ಕಲ್ಯಾಣಪುರದ ರಂಜಿತ್, ಸುಜೀತ್ ಪಿಂಟೋ, ಉಡುಪಿ ಕೊಂಡಕ್ಕೂರಿನ ನ್ಯೂ ಕಾಲನಿ ಪ್ರದೀಪ್ ಪೂಜಾರಿ ಹಾಗೂ ಕುಂಜಿಬೆಟ್ಟು ಕಕ್ಕುಂಜೆಯ ರಾಜೇಶ್ ಪೂಜಾರಿ ಬಂಧಿತ ಆರೋಪಿಗಳು.