ಬಂಟ್ವಾಳ, ಜು 30: ಸಂಚಾರ ನಿಯಂತ್ರಣ ಮತ್ತು ರಸ್ತೆ ಸುರಕ್ಷತಾ ಮಾಸಾಚರಣೆ ಅಂಗವಾಗಿ ಬಂಟ್ವಾಳದಲ್ಲಿ ಖಾಸಗಿ ಶಾಲಾ ವಾಹನಗಳ ತಪಾಸಣಾ ಕಾರ್ಯ ನಡೆಯಿತು. ಬಂಟ್ವಾಳ ಸಂಚಾರ ಪೋಲೀಸ್ ಠಾಣಾ ಎಸ್.ಐ.ಯಲ್ಲಪ್ಪ ಅವರ ನೇತೃತ್ವದಲ್ಲಿ ತಪಾಸಣೆ ನಡೆಯಿತು.
ಈ ಸಂದರ್ಭದಲ್ಲಿ ವಾಹನ ಸುಸ್ಥಿತಿಯಲ್ಲಿದೆಯಾ? ವಾಹನದಲ್ಲಿ ಮಕ್ಕಳ ಸಂಖ್ಯೆಯ ಬಗ್ಗೆ , ವಾಹನ ಚಾಲಕನ ಪರವಾಣಿಗೆ ಸಹಿತ ಶಾಲಾ ವಾಹನಗಳು ಪಾಲಿಸಬೇಕಾದ ಕ್ರಮಗಳನ್ನು ತಪಾಸಣೆ ನಡೆಸಲಾಯಿತು. ಜೊತೆಗೆ ತಪಾಸಣೆ ವೇಳೆ ದಾಖಲೆ ಪತ್ರಗಳು ಸರಿಯಾಗಿಲ್ಲದ ವಾಹನಗಳ ಮೇಲೆ ಕೇಸು ದಾಖಲಿಸಿದರು.