ಮಂಗಳೂರು, ಜು 30: ಸರ್ಕಾರದ ಆದೇಶದ ಪ್ರಕಾರ ಸಾರ್ವಜನಿಕ ಸ್ಥಳದಲ್ಲಿ ಸಿಸಿ ಕ್ಯಾಮರಾ ಅಳವಡಿಸುವುದು ಕಡ್ದಾಯವಾಗಿದೆ ಎಂದು ಡಿಸಿಪಿ ಹನುಮಂತರಾಯ ಹೇಳಿದ್ದಾರೆ. ರಾಜ್ಯ ಸರ್ಕಾರ ಸಾರ್ವಜನಿಕ ಸುರಕ್ಷಾ ಕಾನೂನನ್ನು ಅಂಗೀಕರಿಸಿದ್ದು, ಆ ಪ್ರಕಾರ ಸಿಸಿಟಿವಿ ಅಳವಡಿಕೆ ಕಡ್ಡಾಯವಾಗಿದೆ. ಶಾಲೆ ಕಾಲೇಜು ಅಪಾರ್ಟ್ ಮೆಂಟ್ ಮತ್ತು ವಾಣಿಜ್ಯ ಕಟ್ಟಡಗಳು ಸೇರಿದಂತೆ ಖಾಸಗಿ ಸಂಸ್ಥೆಗಳು ಸಿಸಿಟಿವಿ ಅಳವಡಿಸಬೇಕು . ಇದು ಕೇವಲ ನೆಪಮಾತ್ರ ಆಗಬಾರದು, ಉತ್ತಮ ರೆಸೊಲ್ಯೂಷನ್ ಇರುವ ಕ್ಯಾಮೆರಾಗಳನ್ನೇ ಅಳವಡಿಸಬೇಕು.ಮತ್ತು ಇದು ಒಂದು ತಿಂಗಳ ದಾಖಲೆ ಸಾಂಗ್ರಹಿಸುವಷ್ಟು ಬ್ಯಾಕ್ ಅಪ್ ಹೊಂದಿರಬೇಕು ಎಂದು ತಿಳಿಸಿದ್ದಾರೆ.
ಸಿಸಿಟಿವಿಯೂ ಪ್ರವೇಶ ಮತ್ತು ನಿರ್ಗಮನ ದ್ವಾರ ಸಾರ್ವಜನಿಕ ಸ್ಥಳ ಕೇಂದ್ರಿಕರಿಸಿ ಹಾಕಬೇಕು, ಸಿಸಿ ಕ್ಯಾಮಾರಗಳಲ್ಲಿ ಸೆರೆಯಾದ ದೃಶ್ಯಾವಳಿಗಳ ಮೇಲೆ ಇನ್ನು ಮುಂದೆ ಪೊಲೀಸ್ ಇಲಾಖೆಗಳನ್ನು ಹಸ್ತಾಂತರಿಸಬೇಕು ಎಂದು ಕಾಯ್ದೆಯಲ್ಲಿ ಸ್ಪಷ್ಟವಾಗಿ ಉಲ್ಲೇಖ ಮಾಡಲಾಗಿದೆ ಎಂದು ತಿಳಿಸಿದರು . ರಾಜ್ಯಾದ್ಯಾಂತ ಈ ನಿಯಮ ಜಾರಿಯಾಗಿದ್ದು, ಇದರ ಜಾರಿ ಪ್ರಕ್ರಿಯೆಯ ಉಸ್ತುವಾರಿಯನ್ನು ಪೊಲೀಸ್ ಇಲಾಖೆ ನೋಡಿಕೊಳ್ಳಲಿದೆ ಎಂದರು. ಸೂಚನೆ ಬಳಿಕವೂ ಕಟ್ಟಡ ಮಾಲೀಕರು, ಅಳವಡಿಸಿಕೊಳ್ಳವಲ್ಲಿ ವಿಳಂಬ ಧೋರಣೆ ತೋರಿದರೆ ತಿಂಗಳಿಗೆ 5 ಸಾವಿರ ದಂಡ ವಿಧಿಸಲಾಗುವುದು ಎಂದು ಹಾಗೂ ಸಂಕೀರ್ಣದ ಲೈಸೆನ್ಸ್ ರದ್ದು ಮಾಡುವ ಶಿಫಾರಸ್ಸು ಅಥವಾ ಬೀಗ ಹಾಕುವ ಹಕ್ಕು ಇಲಾಖೆಗೆ ಇದೆ ಎಂದು ತಿಳಿಸಿದರು. ತಮಿಳುನಾಡು ಆಂದ್ರ ಪ್ರದೇಶದಲ್ಲಿ ಈ ಕಾಯ್ದೆ ಪರಿಣಾಮಕಾರಿಯಾಗಿ ಅನುಷ್ಟಾನಗೊಂಡು ಯಶಸ್ವಿಯಾಗಿದೆ.