ಜು, 30: ಶಿರೂರು ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಅವರ ಅನುಮಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಮರಣೋತ್ತರ ಪರೀಕ್ಷೆಯ ಅಂತಿಮ ವರದಿಯನ್ನು ಮಣಿಪಾಲ ಕೆ.ಎಂಸಿ ಆಸ್ಪತ್ರೆಯ ವೈದ್ಯರು ಜುಲೈ 30 ರಂದು ತನಿಖಾಧಿಕಾರಿಗಳಿಗೆ ಹಸ್ತಾಂತರಿಸುವ ಸಾಧ್ಯತೆ ಇದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಇಲ್ಲಿಯವರೆಗೆ ಹಲವು ಅನುಮಾನಗಳ ಕಾರಣದಿಂದಷ್ಟೇ ತನಿಖೆ ನಡೆಯುತ್ತಿದ್ದೂ ಮರಣೋತ್ತರ ವರದಿ ಪೊಲೀಸರ ಕೈ ಸೇರಿದರೆ ತನಿಖೆಯ ದಿಕ್ಕು ಬದಲಾಗುವ ಸಾಧ್ಯತೆ ಇದೆ.
ಮರಣೋತ್ತರ ಪರೀಕ್ಷೆ ವರದಿಗೆ ತನಿಖೆಯಲ್ಲಿ ಮಹತ್ವದ ಪಾತ್ರವಿದೆ ಇಲ್ಲಿಯವರೆಗೆ ದೇಹಕ್ಕೆ ವಿಷ ಹೇಗೆ ಸೇರಿದೆ ಎಂಬ ನೆಲೆಯಲ್ಲಿ ತನಿಖೆ ಕೇಂದ್ರೀಕೃತವಾಗಿತ್ತು.
ಇಲ್ಲಿಯವರೆಗೆ ಪ್ರಕರಣದಲ್ಲಿ ಮಹಿಳೆಯ ಪಾತ್ರ, ಡಿವಿಆರ್, ಕೇಂದ್ರಿತ ಸುದ್ದಿಗಳು ವರದಿಯಾಗುತ್ತಿದ್ದವೇ ಹೊರತು ಇವ್ಯಾವುದೂ ತನಿಖೆಯ ವ್ಯಾಪ್ತಿಗೆ ಬಂದಿರಲಿಲ್ಲ. ಮರಣೋತ್ತರ ವರದಿ , ವಿಧಿ ವಿಜ್ಞಾನ ಪ್ರಯೋಗಲಯದ ವರದಿ ತನಿಖಾಧಿಕಾರಿಗಳಿಗೆ ಅಂತಿಮ ಚಿತ್ರಣ ನೀಡಲಿದೆ.