ಮಣಿಪಾಲ, ಜು 29: ತಂಡವೊಂದು ವ್ಯಕ್ತಿಯೋರ್ವನನ್ನು ಚಾಕುವಿನಿಂದ ಕೊಲೆಗೈದ ಘಟನೆ ಮಣಿಪಾಲದ ರಿಕ್ರೀಯೆಷನ್ ಕ್ಲಬ್ ಬಳಿ ಜು 29 ರ ಭಾನುವಾರ ನಡೆದಿದೆ. ಕೊಲೆಗೀಡಾದ ಗುರುಪ್ರಸಾದ್ ಭಟ್ ಎಂದು ಗುರುತಿಸಲಾಗಿದೆ.
ವಿಕೆಂಡ್ ನ ಪಾರ್ಟಿಯ ನಂತರ ಕೊಲೆ ನಡೆದಿದೆ ಎಂದು ತಿಳಿದುಬಂದಿದೆ. ’'ಹಾಯ್ ಮಾರುತ”ಪತ್ರಿಕೆಯ ಹಿತೇಂದ್ರ್ ಪ್ರಸಾದ್ ಜತೆ ನಂಟು ಹೊಂದಿದ್ದ ಹಿತೇಂದ್ರ್ ಪ್ರಸಾದ್ ಸಾವಿನ ನಂತರ ತನ್ನದೇ ಆದ, ' ಸತ್ಯ' ಅನ್ನೋ ಹೆಸರಿನಲ್ಲಿ ಮಾಸಿಕ ಪತ್ರಿಕೆ ನಡೆಸಿ ನಷ್ಟ ಅನುಭವಿಸಿದ್ದರು. ಬಳಿಕ ರಿಕ್ರೀಯೆಷನ್ ಕ್ಲಬ್ ನಡೆಸುತ್ತಿದ್ದರು. ಒಮಿನಿ ಕಾರಿನಲ್ಲಿ ಬಂದ ನಾಲ್ಕು ಜನರ ತಂಡ ಚಾಕುವಿನಿಂದ ತಿವಿದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ತಕ್ಷಣ ಕ್ಲಬ್ ಸಿಬ್ಬಂದಿಗಳು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರೂ ಕೊನೆಯುಸಿರೆಳಿದಿದ್ದಾರೆ. ಮಣಿಪಾಲ ಪೊಲೀಸರು ಪ್ರಕರಣವನ್ನು ಇನ್ನೂ ತನಿಖೆ ನಡೆಸುತ್ತಿದ್ದಾರೆ.