ಬೆಳ್ತಂಗಡಿ, ಜು 29: ತುಳುನಾಡಿನ ಸುಂದರ ಪ್ರಾಕೃತಿಕ ಭೌಗೋಳಿಕ ಪರಿಸರ, ಭಾಷೆ, ಸಂಸ್ಕೃತಿ ವೈವಿಧ್ಯಮಯಆಹಾರ, ಜೀವನಶೈಲಿ, ಗುತ್ತು - ಬೀಡಿನ ಆಡಳಿತ ವ್ಯವಸ್ಥೆ, ಅವಿಭಕ್ತಕುಟುಂಬ ಜೀವನ ಪದ್ಧತಿ, ಭೂತಾರಾಧನೆ, ನಾಗಾರಾಧನೆ ಮೊದಲಾದ ಸಂಪ್ರದಾಯಗಳು ವಿಶಿಷ್ಟವಾಗಿದ್ದು ಇದನ್ನು ಉಳಿಸಬೇಕು. ಇಂದಿನ ಮಕ್ಕಳಿಗೆ ತುಳು ಭಾಷೆ, ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿಯ ಸೊಗಡನ್ನು ತಿಳಿಸಬೇಕು ಎಂದು ಧರ್ಮಸ್ಥಳದ ಹೇಮಾವತಿ ವಿ. ಹೆಗ್ಗಡೆಯವರು ಹೇಳಿದರು.
ಅವರು ಉಜಿರೆಯಲ್ಲಿ ಶನಿವಾರ ಸಂಜೆ ಅಖಿಲ ಭಾರತೀಯ ಸಾಹಿತ್ಯ ಪರಿಷತನ ಬೆಳ್ತಂಗಡಿ ತಾಲ್ಲೂಕು ಘಟಕದ ಆಶ್ರಯದಲ್ಲಿ ಆಯೋಜಿಸಲಾದ ತುಳುನಾಡ ಆಷಾಢ ವೈಭವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಯಕ್ಷಗಾನ, ನಾಟಕ, ಸಿನಿಮಾಗಳ ಮೂಲಕ ಇಂದು ತುಳು ಜನಪ್ರಿಯವಾಗುತ್ತಿದೆ. ಶಾಲೆಗಳಲ್ಲಿ ಈಗ ತುಳು ಅಧ್ಯಯನಕ್ಕೆ ಪ್ರೋತ್ಸಾಹ ನೀಡಲಾಗುತ್ತಿದೆ. ಧರ್ಮಸ್ಥಳದ ವತಿಯಿಂದ ಮಂಗಳೂರು ವಿಶ್ವವಿದ್ಯಾಲಯದಲ್ಲಿ ತುಳು ಅಧ್ಯಯನ ಪೀಠ ಆರಂಭಿಸಲಾಗಿದೆ. ಪ್ರತಿ ವರ್ಷಜಿಲ್ಲಾ ಮಟ್ಟದಲ್ಲಿ ಧರ್ಮಸ್ಥಳ ರತ್ನವರ್ಮ ಹೆಗ್ಗಡೆ ಸ್ಮಾರಕ ತುಳು ನಾಟಕರಚನಾ ಸ್ಪರ್ಧೆ ಏರ್ಪಡಿಸಿ ನಗದು ಬಹುಮಾನ ನೀಡಲಾಗುತ್ತಿದೆ. ಧರ್ಮಸ್ಥಳದಲ್ಲಿ ತುಳು ಲಿಪಿಯಲ್ಲಿರುವ ೧೫೦೦ ತಾಡೋಲೆ ಗ್ರಂಥಗಳನ್ನು ಸಂರಕ್ಷಿಸಿ ಇಡಲಾಗಿದೆ. ಜರ್ಮನಿಯ ಲಾರಿ ಹಾಂಕೊ ಸಿರಿಗಳ ಪಾಡ್ದನದ ಬಗ್ಗೆ ಸಂಶೋಧನಾತ್ಮಕಅಧ್ಯಯನ ನಡೆಸಿರುವುದನ್ನು ಅವರು ಸ್ಮರಿಸಿದರು. ಗ್ರಾಮೀಣ ಪ್ರದೇಶದಲ್ಲಿ ಅವಿಭಕ್ತಕುಟುಂಬ ಜೀವನ ಪದ್ಧತಿ, ಕೃಷಿ ಸಂಸ್ಕೃತಿ, ಹಿರಿಯರ ಮಾರ್ಗದರ್ಶನ, ಶುಚಿ - ರುಚಿಯಾದ ತಿಂಡಿ - ತಿನಿಸುಗಳು, ಪಾನೀಯಗಳು ಇವುಗಳ ಸೊಗಡನ್ನುಅವರು ವಿವರಿಸಿದರು. ಆರೋಗ್ಯರಕ್ಷಣೆಗೆ ಇವು ಸಹಕಾರಿಯಾಗಿವೆಎಂದರು. ತುಳುವರ ಸೌಮ್ಯ ಸ್ವಭಾವ, ಸಮೃದ್ಧ ಸಂಸ್ಕೃತಿ ನಮಗೆ ವಿಶೇಷ ಮಾನ್ಯತೆಯನ್ನು ನೀಡುತ್ತಿದೆ ಎಂದರು.
ಉಜಿರೆ ಜನಾರ್ದನ ಸ್ವಾಮಿ ದೇವಳದ ಆಡಳ್ತೆ ಮೊಕ್ತೇಸರ ವಿಜಯ ರಾಘವ ಪಡ್ವೆಟ್ನಾಯ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು. ನಿವೃತ್ತ ಮುಖ್ಯೋಪಾಧ್ಯಾಯ ಕೆ. ರಘುನಾಥರೈಆಟಿ ತಿಂಗಳ ವಿಶೇಷತೆ ಬಗ್ಗೆ ಮಾಹಿತಿ ನೀಡಿದರು. ಅಖಿಲ ಭಾರತೀಯ ಸಾಹಿತ್ಯ ಪರಿಷತನ್ ರಾಜ್ಯ ಕಾರ್ಯದರ್ಶಿ ಡಾ| ಮಾಧವಪ್ರಾಸ್ತಾವಿಕವಾಗಿ ಮಾತನಾಡಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನಬಗ್ಗೆ ಮಾಹಿತಿ ನೀಡಿದರು.
ಶಾಸಕ ಕೆ. ಹರೀಶ್ ಪೂಂಜ, ಬೆಳ್ತಂಗಡಿ ರೋಟರಿಕ್ಲಬ್ಅಧ್ಯಕ್ಷಜಗದೀಶ್ ಪ್ರಸಾದ್, ಉಜಿರೆ ಜೆ.ಸಿ ಅಧ್ಯಕ್ಷ ವಿಜಯೇಂದ್ರ ದೇವಾಡಿಗ, ಪತ್ರಕರ್ತರ ಸಂಘದ ಅಧ್ಯಕ್ಷ ಮನೋಹರ ಬಳಂಜ, ಬೆಳ್ತಂಗಡಿ ಲಯನ್ಸ್ಕ್ಲಬ್ ಅಧ್ಯಕ್ಷೆ ಮೇದಿನಿ ಗೌಡ, ಪರಿಷತ್ನ ನಿಕಟ ಪೂರ್ವ ಅಧ್ಯಕ್ಷ ಡಾ. ಶ್ರೀಧರ ಭಟ್ ಉಪಸ್ಥಿತರಿದ್ದರು.
ಆಟಿ ಕಳಂಜ ಮತ್ತು ಯಕ್ಷಗಾನ ಪ್ರದರ್ಶನಕಾರ್ಯಕ್ರಮಕ್ಕೆ ಹೆಚ್ಚಿನ ಮೆರುಗನ್ನು ನೀಡಿತು. ಶಾಲಾ ವಿದ್ಯಾರ್ಥಿಗಳಿಗೆ ಚೆನ್ನೆಮಣೆ, ಬಿಲ್ಲೀಸ್, ಕಲ್ಲಾಟ ಮತ್ತುತುಳು ಅಕ್ಷರಜೋಡಣೆ ಸ್ಪರ್ಧೆಗಳನ್ನು ನಡೆಸಿ ಬಹುಮಾನ ವಿತರಿಸಲಾಯಿತು. ಪರಿಷತ್ ತಾ| ಅಧ್ಯಕ್ಷ ರವೀಂದ್ರ ಶೆಟ್ಟಿ ಬಳಂಜ ಸ್ವಾಗತಿಸಿದರು. ಕಾರ್ಯದರ್ಶಿ ರಾಮಕೃಷ್ಣಎಸ್.ಕೆ ಧನ್ಯವಾದವಿತ್ತರು. ಉಪಾಧ್ಯಕ್ಷ ರಾಮಕೃಷ್ಣ ಭಟ್ ಚೊಕ್ಕಾಡಿ ಕಾರ್ಯಕ್ರಮ ನಿರ್ವಹಿಸಿದರು.