ಜು 29: ಹ್ಯಾಕರ್ಸ್ ಗಳಿಗೆ ಸವಾಲೆಸೆಯಲು ಹೋಗಿ ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಅಧ್ಯಕ್ಷ ಆರ್.ಎಸ್.ಶರ್ಮಾ ಅವರು ತೀವ್ರ ಮುಖಭಂಗ ಅನುಭವಿಸಿ ಘಟನೆ ಶನಿವಾರ ನಡೆದಿದೆ. ಅವರು ತಮ್ಮ ಟ್ವಿಟ್ವರ್ ಖಾತೆಯಲ್ಲಿ ಆಧಾರ್ ಸಂಖ್ಯೆ ಪ್ರಕಟಿಸಿ ಹ್ಯಾಕರ್ಸ್ ಗಳಿಗೆ ಸವಾಲೆಸಿದ್ದರು , ನನ್ನ ಆಧಾರ್ ಸಂಖ್ಯೆ ಹೇಗೆ ದುರ್ಬಳಕೆ ಮಾಡಿಕೊಳ್ಳುತ್ತೀರಿ ನೋಡೋಣ ಎಂದು ಸವಾಲೊಡ್ಡಿ ಟ್ವಿಟರ್'ನಲ್ಲಿ ಪೋಸ್ಟ್ ಮಾಡಿದ್ದರು. ಆಧಾರ್ ಕಾರ್ಡ್ ದಾರರ ಹಿತಾಸಕ್ತಿ ಕಾಪಾಡಲು ಆಧಾರ್ ಕಾಯ್ದೆಗೆ ತಿದ್ದುಪಡಿ ತರಲು ನ್ಯಾ.ಶ್ರೀಕೃಷ್ಣ ಸಮಿತಿ ಶಿಫಾರಸು ಮಾಡಿದ ಬೆನ್ನಲ್ಲೇ ಶರ್ಮಾ ಅವರು ಈ ಟ್ವೀಟ್ ಮಾಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಫ್ರೆಂಚ್ ಭದ್ರತಾ ತಜ್ಞನೆಂದು ಕರೆದುಕೊಳ್ಳುವ ಎಲಿಯಟ್ ಆಲ್ಡರ್ಸನ್(@fs0c131y) ಎಂಬ ಹ್ಯಾಕರ್ ಟ್ವೀಟ್'ಗೆ ಮಧ್ಯಾಹ್ನ 1.45ರ ಸುಮಾರಿಗೆ ವ್ಯಕ್ತಿಯೋರ್ವ ಪ್ರತಿಕ್ರಿಯೆ ನೀಡಿದ್ದಾರೆ. ಶರ್ಮಾ ಅವರ ಮೊಬೈಲ್ ಸಂಖ್ಯೆ ,ಪ್ಯಾನ್ ಸಂಖ್ಯೆ, ಮತ್ತೊಂದು ಮೊಬೈಲ್ ಸಂಖ್ಯೆ, ಇಮೇಲ್ ಐಡಿ, ಬಳಸುತ್ತಿರುವ ಮೊಬೈಲ್ ಹಾಗೂ ವಾಟ್ಸ್ಆ್ಯಪ್ ಪ್ರೊಫೈಲ್ ಚಿತ್ರವನ್ನು ಟ್ವೀಟಿಸಿದ್ದಾನೆ. ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರಕ್ಕೆ ನೀಡಿದ ಮೊಬೈಲ್ ಸಂಖ್ಯೆಯೊಂದಿಗೆ ಇತರರ ಸಹಾಯದೊಂದಿಗೆ ಇನ್ನಿತರೆ ಮಾಹಿತಿಗಳನ್ನು ಕಲೆಹಾಕಲಾಗಿದೆ. ಇಲ್ಲಿಗೆ ಇದನ್ನು ನಾನು ನಿಲ್ಲಿಸುತ್ತೇನೆ. ಆಧಾರ್ ಕಾರ್ಡ್ ನಂಬರ್'ನ್ನು ಸಾರ್ವಜನಿಕವಾಗಿ ಬಹಿರಂಗ ಪಡಿಸಬಾರದು ಏಕೆ ಎಂಬುದು ನಿಮಗೆ ಅರ್ಥವಾಗಿದೆ ಎಂದು ತಿಳಿಯುತ್ತೇನೆಂದು ಟ್ವೀಟ್ ಮಾಡಿದ್ದಾರೆ.