ಉಡುಪಿ, ಜು 29: ಶಿರೂರು ಶ್ರೀಗಳ ಆರಾಧನೆಗೆ ಇದುವರೆಗೆ ಪೊಲೀಸರು ಅವಕಾಶ ನೀಡಿಲ್ಲ ಎಂದು ಮಠದ ದ್ವಂದ ಮಠವಾಗಿರುವ ಸೋದೆ ಮಠದ ಮೂಲಗಳು ತಿಳಿಸಿವೆ.
ಶಿರೂರು ಮಠದ ಧ್ವಂದ್ವ ಮಠವಾಗಿರುವ ಸೋದೆ ಮಠವು ಜು. 31ರಂದು ಶಿರೂರು ಮೂಲಮಠದಲ್ಲಿ ನಡೆಸಲು ಉದ್ದೇಶಿಸಿದ್ದ ಶಿರೂರು ಸ್ವಾಮೀಜಿಯ ಆರಾಧನೆಗೆ ತನಿಖೆಯ ದೃಷ್ಠಿಯಿಂದ ಪೊಲೀಸರು ಅವಕಾಶ ನಿರಾಕರಿಸಿದರೆನ್ನಲಾಗಿದೆ. ಶಿರೂರು ಸ್ವಾಮೀಜಿಯ ಸಾವಿನ ನಂತರ ಜು.20ರಿಂದ ಶಿರೂರು ಮೂಲ ಮಠವನ್ನು ತನಿಖೆಯ ಉದ್ದೇಶಕ್ಕಾಗಿ ಪೊಲೀಸರು ತಮ್ಮ ಸುಪರ್ದಿಗೆ ಪಡೆದು ಕೊಂಡಿದ್ದು ಪ್ರತೀದಿನ ನಡೆಯುವ ಪೂಜೆಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಇದೀಗ ಶಿರೂರು ಸ್ವಾಮೀಜಿಯ ಆರಾಧನೆಯಿಂದ ತನಿಖೆಗೆ ತೊಂದರೆಯಾಗಭುದೆನ್ನುವ ಕಾರಣಕ್ಕಾಗಿ ಆರಾಧನೆಗೆ ಅವಕಾಶ ನಿರಾಕರಿಸಲಾಗಿದೆ ಎನ್ನಲಾಗಿದೆ.
ಶಿರೂರು ಸ್ವಾಮೀಜಿ ಮೂಲಮಠದಲ್ಲೇ ಕಳೆದ ಎರಡು ವರ್ಷಗಳಿಂದ ವಾಸವಾಗಿರೋದ್ರಿಂದ ಅವರ ಸಾವಿಗೆ ಸಂಬಂಧಪಟ್ಟ ಸಾಕ್ಷಗಳು ಅವರ ಕೋಣೆಗಳಲ್ಲಿರಬಹುದೆನ್ನುವ ಕಾರಣಕ್ಕೆ ಆರಾಧನೆಗೆ ಅನುಮತಿ ನಿರಾಕರಿಸಲಾಗಿದೆ ಅನ್ನೋ ಮಾಹಿತಿ ಲಭ್ಯವಾಗಿದೆ.