ಬಂಟ್ವಾಳ, ಜು28: ಗೆಳೆಯನ ಹುಟ್ಟು ಹಬ್ಬಕ್ಕೆಂದು ತೆರಳಿದ ಬಾಲಕ ನಾಪತ್ತೆಯಾಗಿರುವ ಘಟನೆ ಬಂಟ್ವಾಳದಲ್ಲಿ ನಡೆದಿದೆ.
ಕಾರ್ತಿಕ್ (17) ನಾಪತ್ತೆಯಾದ ಬಾಲಕ.
ಬಂಟ್ವಾಳ ತಾಲೂಕಿನ ಕೆಳಗಿನ ಮಂಡಾಡಿ ನಿತ್ಯಾನಂದ ನಗರ ಗಣೇಶ್ ಕುಲಾಲ್ ಅವರ ಮಗ ಕಾರ್ತಿಕ್ ಜು.20ನೇ ತಾರೀಖಿನಂದು ಗೆಳೆಯನ ಹುಟ್ಟು ಹಬ್ಬಕ್ಕೆ ತೆರಳಿದ್ದ. ಆದರೆ ತಾಯಿಯಲ್ಲಿ ಹೇಳಿ ಮನೆಯಿಂದ ಹೋದವನು ಮತ್ತೆ ಮನೆಗೆ ಬಾರದೆ ನಾಪತ್ತೆಯಾಗಿದ್ದಾನೆ. ಈ ಕುರಿತು ಗೆಳೆಯನನ್ನು ವಿಚಾರಿಸಿದಾಗ ಅತ ಮನೆಗೆ ಬಂದಿಲ್ಲ ಎಂದು ತಿಳಿಸಿದ್ದಾನೆ.
ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಈತನ ಬಗ್ಗೆ ಸುಳಿವು ಸಿಕ್ಕಲ್ಲಿ ನಗರ ಠಾಣೆಯನ್ನು ಸಂಪರ್ಕ ಮಾಡುವಂತೆ ಕೋರಲಾಗಿದೆ.