ಬಂಟ್ವಾಳ, ಜು 28: ಎಲ್ಲರೊಂದಿಗೆ ಬೆರೆತು, ಕುಣಿದು ಕುಪ್ಪಳಿಸಬೇಕಿದ್ದ ಕಂದಮ್ಮ ಸಣ್ಣ ಪ್ರಾಯದಲ್ಲೇ ಮಾರಕ ಕಾಯಿಲೆಯೊಂದಕ್ಕೆ ಗುರಿಯಾಗಿದ್ದಾನೆ. ಮೂರು ವರ್ಷದ ಪುಟ್ಟ ಮಗು ರಕ್ತ ಕ್ಯಾನ್ಸರ್ನಿಂದ ಬಳಲುತ್ತಿದ್ದು, ಔಷಧೋಪಚಾರಕ್ಕಾಗಿ ಬಡ ಸಂಸಾರ ಆರ್ಥಿಕ ಸಹಾಯಕ್ಕಾಗಿ ಎದುರು ನೋಡುತ್ತಿದೆ.
ಬಂಟ್ವಾಳ ತಾಲೂಕು ಮಣಿನಾಲ್ಕೂರು ಗ್ರಾಮದ ಅಜಿಲಮೊಗರು ಸೇವುದಕೊಡಿಯ ಪುಷ್ಪರಾಜ್ ಪೂರ್ಣಿಮಾ ದಂಪತಿಯ 2 ಗಂಡು ಮಕ್ಕಳಲ್ಲಿ ಕಿರಿಯವನಾದ 3 ವರ್ಷದ ಕಂದಮ್ಮ ರಕ್ತ ಕ್ಯಾನ್ಸರ್ನಿಂದ ಬಳಲುತ್ತಿರುವ ಮಗು. ಅನಾರೋಗ್ಯದ ಕಾರಣ ಚಿಕಿತ್ಸೆಗೆಂದು ಆಸ್ಪತ್ರೆಗೆ ಹೋದಾಗ ಈ ಪುಟ್ಟ ಕಂದನಿಗೆ ರಕ್ತದ ಕ್ಯಾನ್ಸರ್ ಮೊದಲ ಹಂತದಲ್ಲಿರುವುದು ಪತ್ತೆಯಾಗಿದೆ. ಮನೆ ತುಂಬಾ ಓಡಾಡಿ ಕೊಂಡು ಆಡಬೇಕಿದ್ದ ಕಂದನಿಗೆ ಬಂದಿರುವ ಕಾಯಿಲೆಯಿಂದ ಮನೆ ಮಂದಿ ಚಿಂತಿತರಾಗಿದ್ದಾರೆ. ಈ ಬಡ ಕುಟುಂಬಕ್ಕೀಗ ದಿಕ್ಕೇ ತೋಚದಂತಾಗಿದೆ. ಜೀವನೋಪಾಕ್ಕಾಗಿ ಕೆಲಸ ಮಾಡುತ್ತಿರುವ ಪುಷ್ಪರಾಜ್ರಿಗೆ ಮಗುವಿನ ಚಿಕಿತ್ಸೆಗೆ ಹಣ ಹೊಂದಿಸುವುದರ ಜೊತೆಗೆ ಮನೆಯಲ್ಲಿರುವ 6 ಸದಸ್ಯರ ದೈನಂದಿನ ಖರ್ಚನ್ನು ಭರಿಸುವುದು ಅಸಾಧ್ಯವಾಗಿದೆ. ಇದೀಗ ಪುಟ್ಟ ಕಂದಮ್ಮನಿಗೆ ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೆಲಸದ ಜೊತೆಗೆ ಆಸ್ಪತ್ರೆಗೂ ಅಲೆದಾಡಬೇಕಾದ ಪರಿಸ್ಥಿತಿ ಪುಷ್ಪರಾಜ್ ಅವರದ್ದು.
ದಾನಿಗಳು ತಮ್ಮ ಕೈಲಾದಷ್ಟು ಸಹಾಯ ಮಾಡಿದ್ದಲ್ಲಿ ಈ ಪುಟ್ಟ ಮಗು ಎಲ್ಲಾ ಮಕ್ಕಳಂತೆ ಆರೋಗ್ಯಕರವಾದ ಜೀವನ ಮಾಡಬಹುದು ಎಂಬ ಆಶಾಭಾವವನ್ನು ಹೆತ್ತವರು ಹೊಂದಿದ್ದಾರೆ.
ಬಡಕುಟುಂಬಕ್ಕೆ ಸಹಾಯ ಮಾಡಲಿಚ್ಛಿಸುವವರು, ಈ ಕೆಳಗಿನ ವಿವರಕ್ಕೆ ಸಹಾಯ ಧನ ನೀಡಬಹುದಾಗಿದೆ.
ಪುಷ್ಪರಾಜ್ - 9743332241
ಬ್ಯಾಂಕ್ ಖಾತೆ ವಿವರ: ಪೂರ್ಣಿಮಾ
ವಿಜಯಾ ಬ್ಯಾಂಕ್, ಅಲ್ಲಿಪಾದೆ ಶಾಖೆ
A/c no -13001231000746
IFSC CODE: VIJB0001310