ಕಾಪು, ಜು 27: ಸೌದಿ ಅರೇಬಿಯಾದ ಆರೋಗ್ಯ ಸಚಿವಾಲಯದ ಅಲ್ ಮೆಕ್ಕಾ ಜನರಲ್ ಆಸ್ಪತ್ರೆಯಲ್ಲಿ ಕಳೆದ ಆರು ವರ್ಷಗಳಿಂದ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದ ಕಾಪು ತಾಲೂಕಿನ ಕುತ್ಯಾರು ಗ್ರಾಮದ ಹೆಝಲ್ ಜೋತ್ಸ್ನಾ(28) ಸಾವನ್ನಪ್ಪಿದ್ದಾರೆ. ಮೃತ ಜೋತ್ಸ್ನಾ ಶಿರ್ವ ಮೂಲದವರು. ಕಳೆದ ಆರು ವರ್ಷಗಳಿಂದ ಸೌದಿಯಲ್ಲಿ ನರ್ಸ್ ಆಗಿದ್ದರು. ಜುಲೈ 19 ರಂದು ಪತಿ ಅಶ್ವಿನ್ ಮಥಾಯಿಸ್ ರೊಂದಿಗೆ ಕಡೆಯದಾಗಿ ಮಾತನಾಡಿದ್ದರು.
ಆದರೆ ಜುಲೈ 21ರಂದು ಸಹೋದ್ಯೋಗಿ ಮೂಲಕ ಸಾವನ್ನಪ್ಪಿರುವ ಮಾಹಿತಿ ಬಂದಿತ್ತು. ಸಾವಿಗೆ ಕಾರಣವೇನು ಅನ್ನೋದು ಇನ್ನೂ ಕೂಡ ತಿಳಿದಿಲ್ಲ. ಸಾವಿಗೆ ನಿಖರ ಮಾಹಿತಿ ಕುಟುಂಬದವರಿಗೂ ತಿಳಿಸಿಲ್ಲ. ಇನ್ನು ಸಾವಿನ ಕುರಿತಂತೆ ಸ್ಥಳೀಯ ನಾಯಕರು ಜಿಲ್ಲಾಧಿಕಾರಿ ಗಮನಕ್ಕೆ ತಂದಿದ್ದಾರೆ. ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಮಹಿಳೆಯ ಕುಟುಂಬದ ವಿವರ ಪಡೆದು ಮಾಹಿತಿ ಪಡೆಯಲು ಪ್ರಯತ್ನಿಸುವುದಾಗಿ ತಿಳಿಸಿದ್ದಾರೆ. ಇನ್ನು ಮೃತ ಮಹಿಳೆಯ ಪತಿ ವಿದೇಶಾಂಗ ಸಚಿವರನ್ನು ಸಂಪರ್ಕಿಸಿದ್ದಾರೆ.