ಮಂಗಳೂರು, ಜು 27: ಗ್ಲೋಬಲ್ ಟ್ರಿಯುಂಫ್ ಫೌಂಡೇಶನ್ ವತಿಯಿಂದ ಕೊಡಲಾಗುವ ಇನೋವೇಶನ್ ಆಫ್ ಅರ್ಲಿ ಲರ್ನಿಂಗ್ ಚೈಲ್ಡ್ ಡೆವಲಪ್ ಮೆಂಟ್ ಎಂಬ ವಿಭಾಗದ ಜಾಗತಿಕ ಮಟ್ಟದ ಪ್ರಶಸ್ತಿಗೆ, ಮಂಗಳೂರು ಎಕ್ಕೂರಿನ ಬೇವ್ಯೂ ಲಿಟಲ್ ಶಾಲೆಯ ಸ್ಥಾಪಕರು ಮತ್ತು ಪ್ರಾಂಶುಪಾಲರಾಗಿರುವ ಸಜಿತ ಕೃಷ್ಣ ಆಯ್ಕೆಯಾಗಿದ್ದಾರೆ.
ಜುಲೈ ೧೪ರಂದು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ದೆಹಲಿಯಲ್ಲಿ ನಡೆಯಲಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಈ ವಿಭಾಗದಲ್ಲಿ ಇವರು ಪಡೆದುಕೊಂಡಿರುವ 7ನೇ ಪ್ರಶಸ್ತಿಯಾಗಿದೆ. ಇವರು ಪೂರ್ವ ಪ್ರಾಥಮಿಕ ವಿದ್ಯಾರ್ಥಿಗಳಿಗೆ ಒಂದು ವಿಭಿನ್ನ ಶೈಲಿಯ ಶಿಕ್ಷಣವನ್ನು ನೀಡುವ ಶಾಲೆಯನ್ನು ಕಳೆದ ನಾಲ್ಕು ವರ್ಷಗಳಿಂದ ನಡೆಸುತ್ತಿದ್ದಾರೆ. ಇವರ ಶಾಲೆಯಲ್ಲಿನ ಶಿಕ್ಷಣ ವಿಧಾನ, ಸಾಂಸ್ಕೃತಿಕ ಮೌಲ್ಯಗಳು ಹಾಗೂ ವ್ಯಕ್ತಿತ್ವ ನಿರ್ಮಾಣ ತರಬೇತಿಗಳು ಸಂಪೂರ್ಣ ವಿಭಿನ್ನವಾಗಿದೆ.
ಇವರು ತಮ್ಮ ಸಹೋದರ ಉಣ್ಣಿ ಕೃಷ್ಣನ್ ನಾಯರ್ ಜತೆ ಸಮಾಜ ಸೇವೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ವಯಸ್ಸಿನ ಬೇಧವಿಲ್ಲದೆ, ತರಗತಿಗಳ ಗೊಂದಲವಿಲ್ಲದೆ ನೀಡುತ್ತಿರುವ ಶಿಕ್ಷಣ ಕ್ರಮ ಇಂದಿನ ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸುತ್ತಿದೆ. ಸಜಿತ ಕೃಷ್ಣನ್ ಓರ್ವ ತಾಯಿಯಾಗಿ, ವಿಭಿನ್ನ ಶಿಕ್ಷಣ ಕ್ರಾಂತಿಯ ಮೂಲಕ ಗುರುತಿಸಿಕೊಂಡಿದ್ದಾರೆ.