ಕಾರ್ಕಳ, ಜು 27: ತೆಳ್ಳಾರು ಕೊಡಮಣಿತ್ತಾಯ ಬ್ರಹ್ಮದೈದರ್ಕಳ ದೈವಸ್ಥಾನದಲ್ಲಿ ಭಾರೀ ಮೊತ್ತ ಬೆಳ್ಳಿ,ಪಂಚಲೋಹ ಹಾಗೂ ನಗದು ಕಳವು ಆಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಜುಲೈ 16ರಂದು ನಡೆದ ಕರ್ಕಟಕ ಸಂಕ್ರಮಣದಂದು ಪೂಜಾ ವಿಧಿ ನೆರವೇರಿದ ಬಾಗಿಲು ಮುಚ್ಚಿರುವ ದೈವಸ್ಥಾನದಲ್ಲಿ ಕಳವು ಪ್ರಕರಣವು ಗುರುವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ. ಗ್ರಾಮಸ್ಥರಾಗಿರುವ ರಾಘುಮೂಲ್ಯರವರು ಮುಂಬಯಿಯಿಂದ ಊರಿಗೆ ಹಿಂತಿರುಗಿದ್ದು, ಗುರುವಾರ ಬೆಳಿಗ್ಗೆ 11 ರ ವೇಳೆಗೆ ಹರಕೆ ಸಲ್ಲಿಸಲೆಂದು ದೈವಸ್ಥಾನ ತೆರಳಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಮಾಹಿತಿ ತಿಳಿಯುತ್ತಿದ್ದಂತೆ ಗ್ರಾಮಸ್ಥರು ದೈವಸ್ಥಾನಲ್ಲಿ ನೆರೆದಿದ್ದು, ಘಟನೆಯ ಕುರಿತು ಪೊಲೀಸರಿಗೆ ಮಾಹಿತಿ ಮಾಹಿತಿ ರವಾಯಿಸಿದ್ದಾರೆ. ಗ್ರಾಮಾಂತರ ಠಾಣಾಧಿಕಾರಿ ವಾಸಪ್ಪ ನಾಯ್ಕ, ನಗರ ಠಾಣಾಧಿಕಾರಿ ನಂಜಾ ನಾಯಕ್ ಹಾಗೂ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಅಗಮಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಕಳವು ಆಗಿರುವ ಸೊತ್ತುಗಳು
ಪಂಚಲೋಹದಿಂದ ತಯಾರಿಸಿದ ಸುಮಾರು ರೂ. ಒಂದುಕಾಲು ಲಕ್ಷ ಬೆಲೆಬಾಳುವ ಕೊಡಮಣಿತ್ತಾಯ ದೈವದ ಉತ್ಸವ ಮೂರ್ತಿ,ರೂ. 95 ಸಾವಿರ ಬೆಲೆಬಾಳುವ ಬೆಳ್ಳಿಯ ಖಡ್ಗ, ರೂ. 1.20ಲಕ್ಷ ಬೆಲೆಬಾಳುವ ಪ್ರಭಾವಳಿ ಹಾಗೂ ಕಾಣಿಕೆ ಡಬ್ಬಿಯಲ್ಲಿ ಇದ್ದ ನಗದನ್ನು ಕಳ್ಳರು ಕದ್ದೊಯ್ದಿದ್ದಾರೆ.
ಅಪಪವಿತ್ರಗೊಳಿಸಿದ ಕಳ್ಳರು
ಕೊಡಮಣಿತ್ತಾಯ ದೈವದ ಗುಡಿಯ ಬೀಗ ಮುರಿದು ಒಳ್ಳಹೊಕ್ಕಿ ದೈವದ ಮಣೆ ಮಂಚಕ್ಕೆ ಅಳವಡಿಸಲಾಗಿದ್ದ ಪ್ರಭಾವಳಿ ಹಾಗೂ ಉತ್ಸವ ಮೂರ್ತಿಯನ್ನು ಹೊತ್ತಯ್ಯಲಾಗಿದೆ. ಇದೇ ಗರ್ಭಗುಡಿಯೊಳಗೆ ಶರ್ಟ್ ಧರಿಸುವುದಕ್ಕೆ ನಿಷೇಧ ವಿದೆ. ಈ ಎಲ್ಲಾ ಶಿಷ್ಟಾಚಾರ ಮುರಿದು ಕಳ್ಳರು ತಮ್ಮ ಚಾಕಚಾಕ್ಯತೆ ತೋರಿಸಿದ್ದಾರೆ. ಈ ಎಲ್ಲಾ ಬೆಳವಣಿಗೆಯಿಂದ ದೈವಸ್ಥಾನದ ಶುದ್ಧೀಕೆರಣ ಪ್ರಕ್ರಿಯೆ ನಡೆಸುವ ಅಗತ್ಯವು ಇದೆ ಎಂಬ ನಂಬಿಕೆಯು ಗ್ರಾಮಸ್ಥರದಾಗಿದೆ.