ಮಂಗಳೂರು, ಸೆ 30: ದ್ವಿಚಕ್ರ ವಾಹನದಲ್ಲಿ ಮನೆಗೆ ಹಿಂತಿರುಗುವ ಸಂದರ್ಭ ಮಸೀದಿಯ ಉಸ್ತಾದರೊಬ್ಬರಿಗೆ ದುಷ್ಕರ್ಮಿಗಳ ತಂಡವೊಂದು ಹಲ್ಲೆ ನಡೆಸಿದ ಘಟನೆ ಕುದ್ರೋಳಿಯಲ್ಲಿ ನಡೆದಿದೆ.
ಟಿಪ್ಪು ಸುಲ್ತಾನ್ ಸಲಫಿ ಮಸೀದಿಯ ಉಸ್ತಾದ್ ಶಾಕೀಬ್ ಸಲೀಂ ಉಮ್ರಿ ಹಲ್ಲೆಗೊಳಗಾದವರು. ರಾತ್ರಿ ನಮಾಜ್ ಮುಗಿಸಿ ಮನೆಗೆ ಬರುವ ವೇಳೆ ಓಮ್ನಿ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಗಾಯಾಳುವನ್ನು ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಆರೋಪಿಗಳ ಕಾರಿನ ಸಂಖ್ಯೆ ಬಗ್ಗೆ ಪೊಲೀಸರಿಗೆ ಮಾಹಿತಿ ದೊರಕಿದ್ದು, ಶೀಘ್ರ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಬಂದರು ಠಾಣಾ ಎಸ್ ಐ ಶಾಂತರಾಮ್ ತಿಳಿಸಿದ್ದಾರೆ.