ಸುಳ್ಯ, ಜು 26: ಇಲ್ಲಿನ ಬಿ.ಎಂ.ಎಸ್ ಆಟೋ ರಿಕ್ಷಾ ಯೂನಿಯನ್ ರಾಜ್ಯ ಸರಕಾರ ಪೆಟ್ರೋಲ್ ಡಿಸೇಲ್ ದರ ಏರಿಕೆ ಪ್ರತಿಭಟನೆ ನಡೆಸಿತು. ಪೆಟ್ರೋಲ್ ಡಿಸೇಲ್ ದರ ಏರಿಕೆ ಮಾಡಿರುವುದರಿಂದ ಜನ ಸಮಾನ್ಯರಿಗೆ ಸಮಸ್ಯೆಯಾಗಿದ್ದು ತಕ್ಷಣ ಇಳಿಸಬೇಕೆಂದು ಒತ್ತಾಯಿಸಿ ಸುಳ್ಯ ಮುಖ್ಯ ರಸ್ತೆಯಲ್ಲಿ ಪ್ರತಿಭಟನೆ ಮೆರವಣಿಗೆ ನಡೆಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದ್ದರು.
ಅಟೋರಿಕ್ಷಾ ಯೂನಿಯನ್ ಅಧ್ಯಕ್ಷ ರಾಧಕೃಷ್ಣ ಬೈತ್ತಡ್ಕ,ಮುಖಂಡ ವಿಜಯಕುಮಾರ್ ಇದ್ದರು ಸೇರಿದಂತೆ ಸುಮಾರು 500 ಕ್ಕೂ ಅಧಿಕ ಆಟೋರಿಕ್ಷಾ ಚಾಲಕ ಹಾಗೂ ಮಾಲಕರು ಪ್ರತಿಭಟನೆ ಮೆರವಣಿಗೆಯಲ್ಲಿ ಭಾಗವಹಿಸಿದರು.