ಮಂಗಳೂರು,ಜು 26: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ಡಾಣದ ಮೂಲಕ ಚಿನ್ನ ಕಳ್ಳಸಾಗಾಟಕ್ಕೆ ಸಂಬಂಧಿಸಿ ಈ ವರ್ಷ ಜೂನ್ ಅಂತ್ಯದವರೆಗೆ ಒಟ್ಟು, 7.06 ಕೋಟಿ ಮೌಲ್ಯದ 22.97 ಕೆ.ಜಿ ಚಿನ್ನ ವಶಪಡಿಸಿಕೊಳ್ಳಲಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮುಟ್ಟು ಗೋಲು ಹಾಕಿದ ಒಟ್ಟು 22.97 ಕೆ.ಜಿ ಚಿನ್ನದಲ್ಲಿ12.59 ಕೆ.ಜಿ ಚಿನ್ನವನ್ನು ಸ್ಮಗ್ಲರ್ ಗಳಿಂದಲೇ ವಶಪಡಿಸಿಕೊಂಡಿರುವುದು ವಿಶೇಷ. ದೇಶದೊಳಗೆ ಸಂಚರಿಸುವ ವಿಮಾನಗಳಲ್ಲಿ ವಿದೇಶದ ಚಿನ್ನ ಸಾಗಾಟ ಮಾಡಿರುವ ಐದು ಪ್ರಕರಣಗಳು ಇದೇ ಅವಧಿಯಲ್ಲಿ ನಡೆದಿದ್ದು, ಇದರಲ್ಲಿ 1.98 ಕೋಟಿ ರೂ. ವೆಚ್ಚದ ಚಿನ್ನ ವಶಪಡಿಸಿಕೊಳ್ಳಲಾಗಿದೆ. ಚಿನ್ನ ಹೊರತುಪಡಿಸಿ 69.24 ಲಕ್ಷದಷ್ಟು ವಿದೇಶಿ ಕರೆನ್ಸಿ ನೋಟುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.
ಕಳ್ಳಸಾಗಾಟಕ್ಕೆ ನಾನಾ ಬಗೆ
ಚಪ್ಪಲಿ ಬಲ್ಸ್ , ಚಾಕಲೋಟ್ ರ್ಯಾಪರ್ಸ್, ಟೂಥ್ ಪೆಸ್ಟ್ , ಗಮ್ ಕವರ್ ಗಳಲ್ಲಿ , ವಯರ್ , ಬುರ್ಕಾ ಜಿಪ್, ಬ್ಯಾಗ್ ಜಿಪ್ , ಬೆಳ್ಳಿಯ ಬಣ್ಣ ಲೇಪಿಸಿ , ಮೊಬೈಲ್ ಚಾರ್ಜರ್, ಸಲಾಡ್ ತಯಾರಿಕೆ ಯಂತ್ರದ ಒಳಗಡೆ ಇಟ್ಟು ಅಕ್ರಮ ಸಾಗಾಟ ಮಾದುತ್ತಿರುವುದು ಪತ್ತೆ ಮಾಡಿದ್ದಾರೆ. ಈವರೆಗೆ ಒಟ್ಟು 40 ಪ್ರಕರಣ ದಾಖಲಿಸಲಾಗಿದೆ. ವಿಮಾನ ಮೂಲಕ ಚಿನ್ನವನ್ನು ವಿವಿಧ ವಿಧಾನಗಳಲ್ಲಿ ಸಾಗಾಟ ಮಾಡಿದ್ದರೂ, ಅಧಿಕಾರಿಗಳು ಅವುಗಳನ್ನು ಪತ್ತೆ ಮಾಡಿ ವಶಪಡಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ
ಕೇರಳ ಭಟ್ಕಳ ಪ್ರಯಾಣಿಕರಿಂದಲೇ ಅಕ್ರಮ
10 ಪ್ರಕರಣಗಳಲ್ಲಿ ಕೇರಳ ಮತ್ತು ಭಟ್ಕಳದ ಪ್ರಯಾಣಿಕರ ಮೇಲೆ ದಾಖಲಾಗಿವೆ. ಇವರಲ್ಲಿ ಮೂರು ಮಂದಿಯನ್ನು ಬಂಧಿಸಲಾಗಿದೆ. ಅಕ್ರಮಗಳಲ್ಲಿ ಕೇರಳ ಮತ್ತು ಭಟ್ಕಳದ ಪ್ರಯಾಣಿಕರೇ ಹೆಚ್ಚಾಗಿ ಇರುವುದು ಕಂಡುಬಂದಿದೆ.