ಕುಂದಾಪುರ, ಜು 25: ಒಮನ್ನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಕುಂದಾಪುರ ತಾಲೂಕಿನ ಕೋಣಿಯ ನಿವಾಸಿಯೊಬ್ಬರು ಮೃತಪಟ್ಟಿದ್ದಾರೆ. ಎಚ್. ಎಮ್. ಟಿ. ನಿವಾಸಿ ಚಂದ್ರ ಮತ್ತು ಸುನಂದ ದಂಪತಿಗಳ ಪುತ್ರ ರಾಜೇಂದ್ರ ಶೆಟ್ಟಿ ಯಾನೆ ಮುನ್ನ(25) ಮೃತರು.
ನಿನ್ನೆ ಕೆಲಸ ಮುಗಿಸಿಕೊಂಡು ತನ್ನ ಸಹೋದರಿಯೊಂದಿಗೆ ಮೊಬೈಲ್ನಲ್ಲಿ ಮಾತನಾಡುತ್ತ ತಮ್ಮ ರೂಮಿಗೆ ತೆರಳುತ್ತಿದ್ದ ವೇಳೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡು ಸ್ಥಳದಲ್ಲಿಯೇ ಮೃತ ಪಟ್ಟಿದ್ದಾರೆ. ಇನ್ನು ರಾಜೇಂದ್ರ ಕುಂದಾಪುರದಲ್ಲಿ ಇಂಜಿನೀಯರಿಂಗ್ ಮುಗಿಸಿ ಕಳೆದ 5 ತಿಂಗಳ ಹಿಂದೆ ವಿದೇಶಕ್ಕೆ ಕೆಲಸಕ್ಕಾಗಿ ತೆರಳಿದ್ದರು ಎನ್ನಲಾಗಿದೆ. ಮೃತ ರಾಜೇಂದ್ರ ತಂದೆ, ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ.