ಬೆಂಗಳೂರು, ಜು 25: ಉಧ್ಯಮಿ ಪುತ್ರನ ಮೇಲೆ ಹಲ್ಲೆ ಮಾಡಿ ಜೈಲು ಪಾಲಾಗಿದ್ದ, ಶಾಂತಿನಗರದ ಕಾಂಗ್ರೆಸ್ ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಜೈಲಿನಿಂದ ಬಿಡುಗಡೆಯಾದ ಬಳಿಕ ಮೊದಲ ಬಾರಿಗೆ ಸಾರ್ವಜನಿಕ ಸಮಾರಂಭದಲ್ಲಿ ಕಾಣಿಕೊಂಡಿದ್ದಾರೆ. ಶಾಂತಿನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಲಪಾಡ್ ಪಶ್ಚಾತಾಪದ ತುಂಬಿದ ನೋವಿನ ಮಾತುಗಳು ಆಡಿದ್ದಾರೆ.
ಜೀವನಲ್ಲಿ ನಾನು ಫೇಲ್ ಆಗಿಬಿಟ್ಟೆ ಆದರೆ ನಾನು ಬದಲಾಗುತ್ತಿದ್ದೇನೆ. ನಾನು ಜೈಲುಪಾಲಾದ ನಾಲ್ಕು ತಿಂಗಳಲ್ಲಿ ನನ್ನ ಮನೆಯವರಿಗಿಂತ ಹಾಗೂ ಇತರ ಎಲ್ಲರಿಗಿಂತಲೂ ನನ್ನನ್ನು ಅತಿಯಾಗಿ ಪ್ರೀತಿಸುವ ತಾತಾ ನೊಂದುಕೊಂಡಿದ್ದರು. ಇನ್ನು ಮುಂದೆ ಒಬ್ಬ ಒಳ್ಳೆಯ ಮಗನಾಗಿ, ಮೊಮ್ಮಗನಾಗಿ ಇರುತ್ತೇನೆ ಎಂಬ ಭರವಸೆ ನೀಡುತ್ತೇನೆ ಎಂದಿದ್ದಾನೆ.
ಜನ ನೀರಿಲ್ಲ ಎನ್ನುವಾಗ ನನಗೆ ಅವರ ಸಮಸ್ಯೆ ನನಗೆ ಅರ್ಥವಾಗುತ್ತಿರಲಿಲ್ಲ,ಯಾಕೆಂದರೆ ನಮ್ಮ ಮನೆಯಲ್ಲಿ ಯಾವಾಗ ನಳ್ಳಿ ತಿರುಗಿಸಿದರೂ ನೀರು ಬರುತ್ತಿತ್ತು. ಆದರೆ ಜೈಲಿನಲ್ಲಿದ್ದಾಗ ಶೌಚಾಲಯದಲ್ಲಿ ನೀರಿಲ್ಲದೆ ಇದ್ದಾಗ ನನಗೆ ನೀರಿಲ್ಲದ ಕಷ್ಟ ತಿಳಿಯುತ್ತಿತ್ತು. ಜೀವನದ ಕಷ್ಟಗಳ ಬಗ್ಗೆ ನನಗೆ ಅರಿವಾಗಿದೆ. ಇನ್ನು ಮುಂದೆ ನನ್ನ ಕೈಲಾದಷ್ಟು ನಾನು ಜನಸೇವೆ ಮಾಡುತ್ತೇನೆ. ಜನರ ಜೊತೆ ಇರುತ್ತೇನೆ ಎಂದು ನಾನು ನಿರ್ಧರಿಸಿದ್ದೇನೆ.
ನನ್ನ ಬೆಂಬಲಕ್ಕೆ ನನ್ನ ತಾತ ನಿಂತಿದ್ದಾರೆ. ಹೀಗಾಗಿ ನಾನು ಒಬ್ಬ ಒಳ್ಳೆಯ ಮನುಷ್ಯನಾಗಿ ಬದಲಾಗಿ ತಾತನ ಹುಟ್ಟುಹಬ್ಬಕ್ಕೆ ಗಿಫ್ಟ್ ನೀಡುತ್ತೇನೆ. ತಾತನಿಗೆ ನಾನು ರಾತ್ರಿ 9 ಗಂಟೆ ಎಲ್ಲಿಯೂ ಹೋಗೊದಿಲ್ಲಎಂದು ಮಾತು ಕೊಟ್ಟಿದ್ದೇನೆ. ಹಾಗಾಗಿ ನಾನು ಈ ಮಾತು ಪಾಲಿಸುತ್ತೇನೆ ಎಂದು ನಲಪಾಡ್ ಹೇಳಿದ್ದಾರೆ.