ಕಾಸರಗೋಡು, ಜು25: ಹೆತ್ತ ಕೂಸನ್ನೇ ಬಾವಿಗೆಸೆದು ಕೊಂದ ಪ್ರಕರಣಕ್ಕೆ ಸಂಬಂಧಪಟ್ಟಂತೆ , ತಾಯಿಯನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ. ಮೊಗ್ರಾಲ್ ಪುತ್ತೂರು ಗ್ರಾಮ ಪಂಚಾಯರ್ ಗೊಳಪಟ್ಟ ಎರಿಯಾಲ್ ಬ್ಲಾರ್ ಕೋಡ್ ನಲ್ಲಿ ಒಂದೂವರೆ ವರ್ಷದ ಪುತ್ರಿ ಆಯಿಷತ್ ಶಮ್ನಾಸ್ ಬಾವಿಗೆ ಬಿದ್ದು ಸಾವಿಗೀಡಾಗಿತ್ತು. ಎರಿಯಾಲ್ ಬ್ಲಾರ್ ಕೋಡ್ ನಲ್ಲಿರುವ ನಸೀಮಳ ತವರು ಮನೆಯ ಬಳಿ ಕಟ್ಟೆಯಿಲ್ಲದ ಬಾವಿ ಯಲ್ಲಿ ಜುಲೈ 18 ರಂದು ಆಯಿಷತ್ ಶಮ್ನಾಸ್ ನ ಮೃತ ದೇಹ ಪತ್ತೆಯಾಗಿತ್ತು. ಪೊಲೀಸರು ಇದನ್ನು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದರು.
ಮಗುವಿನ ಮೃತದೇಹದ ಮರಣೋತ್ತರ ಪರೀಕ್ಷೆಗೊಳಪಡೆಸಲಾಗಿತ್ತು. ನೀರಿನಲ್ಲ್ಲಿ ಮುಳುಗಿ ಮಗು ಸಾವಿಗೀಡಾಗಿರುವುದಾಗಿ ಮರಣೋತ್ತರ ಪರೀಕ್ಷಾ ವರದಿಯಲ್ಲಿ ತಿಳಿಸಲಾಗಿತ್ತು. ಪೊಲೀಸರು ತನಿಖೆಯಲ್ಲಿ ಮಗುವನ್ನು ತಾಯಿ ನಸೀಮಾ ಬಾವಿಗೆ ಎಸೆದು ಹತ್ಯೆ ಮಾಡಿದ್ದಾಗಿ ತಿಳಿದು ಬಂದ ಹಿನ್ನಲೆಯಲ್ಲಿ ಬಂಧಿಸಲಾಗಿದೆ.
ಮಗುವಿನ ತಾಯಿಯ ಸಮಗ್ರ ತನಿಖೆ ಮಾಡಿದಾಗ ಮಗುವನ್ನು ಬಾವಿಗೆಸೆದದ್ದು ತಿಳಿದು ಬಂತು. ತನ್ನ ಮಗುವಿಗೆ ನಡೆಯುವ ಶಕ್ತಿ ಇಲ್ಲವೆಂದು ಆ ಕಾರಣದಿಂದ ಮಗುವನ್ನು ಬಾವಿಗೆಸೆದು ಕೊಲೆಗೈಯಲು ಕಾರಣವಾಗಿದೆ ಎಂದು ನಸೀಮಾ ಹೇಳಿಕೆ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.