ಮಂಗಳೂರು, ಜು 24: ಶಿರೂರು ಶ್ರೀ ಸಾವಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಧ್ಯಮಗಳಲ್ಲಿ ನಾನಾತೆರನಾದ ಸುದ್ದಿಗಳು ಹರಿದಾಡುತ್ತಿದ್ದು ಇವೆಲ್ಲವೂ ಸತ್ಯಕ್ಕೆ ದೂರವಾದುದು ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಮಾಧ್ಯಮಗಳಿಗೆ ಸ್ಪಷ್ಟಪಡಿಸಿದ್ದಾರೆ.
ತನಿಖೆಗೆ ಬೇಕಾಗಿರುವ ಮಾಹಿತಿಯನ್ನು ಕಲೆ ಹಾಕುತ್ತಿರುವುದು ನಿಜ. ಎಫ್ ಎಸ್ ಎಲ್ ವರದಿ ಬರುವವರೆಗೆ ಯಾವುದೆ ಕ್ರಾ ಕೈಗೊಳ್ಳಲು ಸಾಧ್ಯವಿಲ್ಲ. ಇದು ಪ್ರಮುಖ ವ್ಯಕ್ತಿಯ ಘಟನೆಯಾಗಿದ್ದು ವಿಸ್ತೃತ ವರದಿ ಸಿದ್ದಪಡಿಸಬೇಕು . ಪ್ರತಿಯೊಂದನ್ನು ಸೂಕ್ಷ್ಮವಾಗಿ ಪರಿಶೀಲಿಸಬೇಕಾಗಿರುವುದರಿಂದ ಸ್ವಲ್ಪ ವಿಳಂಬವಾಗಬಹುದು ಎಂದರು. ಇನ್ನೊಂದೆಡೆ ವಿಷಯ ಬಾಟಲಿ ವಿಚಾರ ಹಾಗೂ ಶಿರೂರು ಶ್ರೀ ಸಾವಿನ ಪ್ರಕರಣದಲ್ಲಿ ತಳುಕು ಹಾಕಿಕೊಂಡಿರುವ ರಮ್ಯಾ ಶೆಟ್ಟಿ ಬುರ್ಖಾ ಧರಿಸಿ ಪರಾರಿಯಾಗಲು ಯತ್ನಿಸಿದ ವಿಚಾರ ಕೇವಲ ವದಂತಿಯಷ್ಟೇ ಎಂದು ಸ್ಪಷ್ಟಪಡಿಸಿದರು.
ಈ ಹಿಂದೆ ಆಳದಂಗಡಿ ಕಾರಣಿಕ ಸತ್ಯದೇವತೆ ದೈವಸ್ಥಾನದ ಮುಂದೆ ಇಬ್ಬರು ಮಹಿಳೆಯರೊಂದಿಗೆ ರಮ್ಯಾ ಶೆಟ್ಟಿ ಬುರ್ಖಾ ಹಾಕಿಕೊಂಡು ಚಾಲಕನ ಸಹಿತ ಎರ್ಟಿಗಾ ಕಾರಿನಲ್ಲಿ ಹೋಗುತ್ತಿದ್ದಾಗ ವೇಣೂರು ಪೊಲೀಸರು ಮಫ್ತಿಯಲ್ಲಿ ಅವರಿದ್ದ ಗಾಡಿಯನ್ನು ಹಿಂಬಾಲಿಸಿ ಚಾಲಕ ಸಹಿತ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ ಎಂಬುದಾಗಿ ಸುದ್ದಿಯಾಗಿತ್ತು.