ಬೆಂಗಳೂರು, ಜು 24 : ಬೌರಿಂಗ್ ಇನ್ಸ್ಟಿಟ್ಯೂಟ್ ಕ್ಲಬ್ ಲಾಕರ್ನಲ್ಲಿ ಸಿಕ್ಕಿದ ಕೋಟ್ಯಂತರ ರೂ. ನಗದು , ವಜ್ರಾಭರಣ ಹಾಗೂ ಆಸ್ತಿ ಪತ್ರ ದೊರಕ್ಕಿದ್ದು ಅವರುಗಳ ಮೌಲ್ಯ ಕೇಳಿದರೆ ಎಂಥವರಿಗಾದರೂ ದಂಗು ಬಡಿಯುತ್ತದೆ. ಬಗೆದಷ್ಟೂ ರಹಸ್ಯ ನಿಧಾನವಾಗಿ ತೆರೆದುಕೊಳ್ಳುತ್ತಿದೆ. ಮೊದಲಿಗೆ ಲಾಕರ್ನಲ್ಲಿ ಸಿಕ್ಕ ಆಸ್ತಿ ಪತ್ರಗಳ ಮೌಲ್ಯ 550 ಕೋಟಿ ರೂ. ಎಂದಾಗಿತ್ತು. ಆದರೆ ಇದೀಗ ಇವುಗಳ ಮೌಲ್ಯವೂ 800 ಕೋಟಿ ರೂ.ಗೂ ಅಧಿಕ ಎಂದು ತಿಳಿದು ಬಂದಿದ್ದೂ ತನಿಖೆ ಮುಂದುವರಿದಂತೆ ಬೇನಾಮಿ ಆಸ್ತಿಗಳು ದೊರಕುವ ಸಾಧ್ಯತೆಗಳು ಇದೆ ಆಸ್ತಿ ಪತ್ರದಲ್ಲಿ ಹಲವು ಪ್ರಭಾವಿ ರಾಜಕಾರಣಿಗಳು, ಅವರ ಮಕ್ಕಳು ಹಾಗೂ ಸಂಬಂಧಿಕರ ಹೆಸರು ಉಲ್ಲೇಖವಾಗಿದ್ದು, ಐಟಿ ಇಲಾಖೆ ಈ ಬಗ್ಗೆಯೂ ಪರಿಶೀಲನೆ ಪ್ರಾರಂಭಿಸಿದೆ.
ಇನ್ನು ಅವಿನಾಶ್ ಗೆ ವಿಚಾರಣೆಗೆ ಹಾಜರಾಗುವಂತೆ ಐಟಿ ಅಧಿಕಾರಿಗಳು ಸಮನ್ಸ್ ನೀಡಿದ್ದರು. ಇದೇ ದಿನ ವಿಚಾರಣೆಗೆ ಬರಬೇಕು ಎಂದು ಸೂಚಿಸಿದ್ದರೂ ಅವಿನಾಶ್ ಸೋಮವಾರ ಹಾಜರಾಗಲಿಲ್ಲ. ಹೀಗಾಗಿ ಜುಲೈ 25 ರಂದು ಕ್ವೀನ್ಸ್ ರಸ್ತೆಯಲ್ಲಿರುವ ಆದಾಯ ತೆರಿಗೆ ಇಲಾಖೆಯಲ್ಲಿ ಅವಿನಾಶ್ ವಿಚಾರಣೆಗೆ ಹಾಜರಾಗುವ ಸಾಧ್ಯತೆಗಳು ಹೆಚ್ಚಾಗಿವೆ.ಇನ್ನೊಂದೆಡೆ, ಅವಿನಾಶ್ ಫೇಸ್ ಬುಕ್ ಹಾಗೂ ಟ್ವಿಟ್ವರ್ ಮಾಹಿತಿಗಳು ಯಾರಿಗೂ ಸಿಗದಂತೆ , ತಮ್ಮ ಖಾತೆಗಳನ್ನು ಡಿ ಆಕ್ಟಿವೇಟ್ ಮಾಡಿದ್ದಾರೆ.