ಉಡುಪಿ, ಜು 24: ತಾರುಣ್ಯದಲ್ಲಿ ನನಗೆ ಸ್ತ್ರೀ ಸಂಗವಿತ್ತು, ತಮಿಳುನಾಡಿನಲ್ಲಿ ಪುತ್ರಿ ಇದ್ದಳೆಂದು ಇತ್ತೀಚೆಗೆ ಶಿರೂರು ಮಠದ ಶ್ರೀಲಕ್ಷ್ಮೀವರ ಸ್ವಾಮೀಜಿ ತೀರ್ಥರ ಅಪ್ತ ವರ್ಗ ಬಹಿರಂಗಗೊಳಿಸಿದ ಆಡಿಯೋದಲ್ಲಿ ಉಲ್ಲೇಖಿಸಿರುವುದು ಶುದ್ದ ಸುಳ್ಳು. ನನ್ನ ಮೇಲೆ ಮಾಡಿರುವ ಅಪವಾದ ಸಾಬೀತಾದರೆ ತಕ್ಷಣವೇ ಪೀಠ ತ್ಯಾಗಕ್ಕೂ ಸಿದ್ದ ಎಂದು ಪೇಜಾವರ ಮಠದ ಶ್ರೀ ವಿಶ್ವೇಶ್ವತೀರ್ಥ ಸ್ವಾಮೀಜಿ ಸ್ಪಷ್ಟನೆ ನೀಡಿದ್ದಾರೆ.
ನನ್ನ ಮೇಲೆ ಹೊರಿಸಿದ ಯಾವುದೇ ಆರೋಪಗಳ ಬಗ್ಗೆ ಯಾವ ವಿಚಾರಣೆ, ಪರೀಕ್ಷೆಯನ್ನೂ ಎದುರಿಸಲು ಸಿದ್ದನಿದ್ದೇನೆ. 2017 ರ ಡಿಸೆಂಬರ್ ನಲ್ಲಿ ಅನಾಮಧೇಯರು ಕಳುಹಿಸಿ ಪತ್ರದಲ್ಲಿ ನಿಮಗೆ ಮದುವೆಯಾಗಿದೆ. ಗಂಡು ಮಗನೆಂದು ಅವನ ಕುಲನಾಮ ಉಲ್ಲೇಖಿಸಿದ್ದರು. ಆದರೆ ಈಗ ಹೆಣ್ಣು ಹೆಸರು ಉಲ್ಲೇಖಿಸಿದ್ದಾರೆ. ಈ ವ್ಯತ್ಯಾಸ ಗಮನಿಸಿದರೆ ಇದೊಂದು ಊಹಾಪೋಹಿತವಷ್ಟೇ ಎಂದು ತಿಳಿದು ಬರುತ್ತದೆ. ಇಂತಹ ಹೇಳಿಕೆಯನ್ನು ಯಾರು ನಂಬಲಾರರು, ಒಂದು ವೇಳೆ ಯಾರದರೊಬ್ಬರು, ಸಾಬೀತು ಪಡಿಸಿದರೆ ಪೀಠ ತ್ಯಾಗಕ್ಕೂ ಸಿದ್ದ ಎಂದಿದ್ದಾರೆ.
ಹಿಂದಿನ ಪಲಿಮಾರು ಯತಿಗಳಾದ ಶ್ರೀ ರಘುವಲ್ಲಭತೀರ್ಥರು, ಹಿಂದಿನ ಶಿರೂರು ಶ್ರೀ ಮನೋಜ್ಞತೀರ್ಥರು, ಸುಬ್ರಮಣ್ಯ ಮಠದ ಯತಿ ವಿದ್ಯಾಭೂಷಣರು ಪೀಠ ತ್ಯಾಗ ಮಾಡುವಲ್ಲಿ ನನ್ನ ಪಾತ್ರವಿಲ್ಲ. ಅವರನ್ನು ಪೀಠದಲ್ಲಿಯೇ ಉಳಿಸಲು ಎಲ್ಲಾ ಪ್ರಯತ್ನ ಮಾಡಿದ್ದೇನೆ .ಆದರೆ ಅವರೆ ತಮ್ಮ ಇಚ್ಚೆಯಂತೆ ಪೀಠ ತ್ಯಾಗ ಮಾಡಿದರೆ ಅದರಕ್ಕೆ ನನ್ನನ್ನು ದೂಷಿಸುವುದು ಸರಿಯಲ್ಲ ಎಂದರು ಮಾಧ್ಯಮಗಳಿಗೆ ಸ್ಪಷ್ಟಪಡಿಸಿದರು.