ನವದೆಹಲಿ, ಜು 23: ದೇಶದೆಲ್ಲೆಡೆ ಸಂಚಲನವನ್ನುಂಟು ಮಾಡಿದ್ದ ಬುರಾರಿ ಪ್ರದೇಶದಲ್ಲಿ ನಡೆದ ಒಂದೇ ಕುಟುಂಬದ 11 ಜನರ ಸಾಮೂಹಿಕ ಆತ್ಮಹತ್ಯೆ ಪ್ರಕರಣದ ಮನೆಯಲ್ಲಿದ್ದ ಅವರ ಸಾಕು ನಾಯಿಯೂ ಸಾವನಪ್ಪಿದೆ. ಘಟನೆ ನಡೆದು 22 ದಿನಗಳ ನಂತರ ಈಗ ಟಾಮಿಯೂ ಹೃದಯಾಘಾತದಿಂದ ಸಾವನ್ನಪ್ಪಿದೆ.
ಮನೆಯವರೆಲ್ಲರೂ ಆತ್ಮಹತ್ಯೆ ಮಾಡಿಕೊಳ್ಳುವ ಸಂದರ್ಭ ಅವರ ಮನೆಯ ಸಾಕು ನಾಯಿ ಟಾಮಿಯನ್ನು ಮೇಲಿನ ಮಹಡಿಯಲ್ಲಿ ಕಟ್ಟಿಹಾಕಿದ್ದರು. ಹಾಗಾಗಿ ಟಾಮಿ ಬದುಕುಳಿದಿತ್ತು. ಘಟನೆಯ ನಂತರ ಟಾಮಿಯನ್ನು ಪ್ರಾಣಿ ಹಕ್ಕುಗಳ ಕಾರ್ಯಕರ್ತ ಸಂಜಯ್ ಮಹಾಪಾತ್ರಾ ಎಂಬವರು ನೊಯ್ಡಾದ ಅನಿಮಲ್ ಕೇರ್ ಸೆಂಟರ್ಗೆ ಒಯ್ದಿದ್ದರು. ಆದರೆ ತನ್ನ ಮನೆಯವರನ್ನು ಕಾಣದೆ ಕಂಗಾಲಾಗಿದ್ದ ನಾಯಿ. ತೀವ್ರ ಖಿನ್ನತೆಯಿಂದ ಬಳಲುತ್ತಿತ್ತು. ದಿನೇ ದಿನೇ ಆರೋಗ್ಯವೂ ಕ್ಷೀಣಿಸುತ್ತಿತ್ತು. ಆದರೆ ಜು ಭಾನುವಾರ ಸಂಜೆ 7 ಗಂಟೆಗೆ ಹೃದಯಾಘಾತದಿಂದ ಸಾವನ್ನಪ್ಪಿದೆ ಅಂತಾ ಟಾಮಿ ಜವಾಬ್ದಾರಿ ತಗೆದುಕೊಂಡಿದ್ದ ಸಂಜಯ್ ತಿಳಿಸಿದ್ದಾರೆ.