ಉಡುಪಿ, ಜು 23: ಶಿರೂರು ಶ್ರೀ ಅವರ ಅನುಮಾನಾಸ್ಪದ ಸಾವಿಗೆ ಕಾರಣವಾಗಿರಬಹುದಾದ ಹಲವು ಅನುಮಾನಗಳ ಬೆನ್ನತ್ತಿರುವ ಪೊಲೀಸರು ಎಲ್ಲಾ ಅಯಾಮದಲ್ಲೂ ತನಿಖೆ ನಡೆಸುತ್ತಿದ್ದಾರೆ. ಇನ್ನೊಂದೆಡೆ ಭೂ ಮಾಫಿಯಾದ ಜತೆಗೆ ಭೂಗತ ಲೋಕದ ನಂಟಿನ ಶಂಕೆಯ ನೆಲೆಯಲ್ಲಿ ಪೊಲೀಸ್ ತನಿಖೆ ಆರಂಭವಾಗಿದೆ. ಶ್ರಿಗಳ ಜತೆಗೆ ಪಾಲುದಾರಿಕೆ ಹೊಂದಿದ್ದ ರಿಯಲ್ ಎಸ್ಟೇಟ್ , ಬಿಲ್ಡರ್ ಗಳಿಂದ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದು, ಈ ಸಾಂಬಂಧ ನಾಲ್ಕು ಮಂದಿಯ ವಿಚಾರಣೆ ನಡೆಸಿದ್ದಾರೆ.
ಇನ್ನೊಂದೆಡೆ ಶ್ರೀಗಳಿಗೆ 26 ಕೋಟಿ ರೂಪಾಯಿ ವಂಚಿಸಿದ ಉದ್ಯಮಿಗಳ ಹುಡುಕಿಕೊಂಡು ಪೊಲೀಸರ ತಂಡವೊಂದು ಮುಂಬಯಿಗೂ ತೆರಳಿದೆ. ಅಂಡರ್ ವಲ್ಡ್ ನ ಪಾತಕಿಗಳ ಸಹಾಯದೊಂದಿಗೆ ಶಿರೂರು ಶ್ರೀಗಳಿಗೆ ಬೆದರಿಸಿ ಒಡ್ಡಿದ್ದ ಭೂಮಾಫಿಯದಿಂದ ಶಿರೂರು ಶ್ರೀಗಳ ಪ್ರಾಣಕ್ಕೆ ಕುತ್ತು ಸಂಭವಿಸಿತೆ ಎನ್ನುವ ಆಯಾಮದಲ್ಲೂ ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ಮತ್ತೊಂದು ನೆಲೆಗಟ್ಟಿನಲ್ಲೂ ತನಿಖೆ ಕೈಗೆತ್ತಿಕೊಂಡಿರುವ ಪೊಲೀಸರು ಉಡುಪಿ , ಹಿರಿಯಡ್ಕದ ಮಹಿಳೆಯರೊಂದಿಗೆ ಇದ್ದ ನಂಟು , ತಮ್ಮ ಮೈಮೇಲೆ ಧರಿಸಿದ್ದ ಆಭರಣ ಮಾತ್ರವಲ್ಲ ದೇವರಿಗೆ ಹರಕೆ ರೂಪದಲ್ಲಿ ಬಂದ ಆಭರಣಗಳು , ಭೂ ವ್ಯವಹಾರ , ಮದ್ಯ, ಮಾದಕ ವಸ್ತುಗಳ ಆಯಾಮದಲ್ಲೂ ತನಿಖೆ ನಡೆಯುತ್ತಿದೆ.
ಶಿರೂರು ಶ್ರೀಗಳು ಮೂರು ಮೊಬೈಲ್ ಫೋನ್ ಹೊಂದಿದ್ದು, ತನಿಖಾ ತಂಡವೂ ಇವುಗಳ ಪರಿಶೀಲನೆಯಲ್ಲೂ ತೊಡಗಿದ್ದಾರೆ. ಹಾಗೂ ಸಿಸಿ ಟಿವಿ ಸಾಕ್ಷ್ಯ ವನ್ನೂ ಸಂಗ್ರಹಿಸಿ ಪರಿಶೀಲನೆಯಲ್ಲಿ ತೊಡಗಿದ್ದಾರೆ.