ಮಂಗಳೂರು, ಸೆ 29 : ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸಂಚರಿಸುವ ವಿಮಾನಗಳ ಸುರಕ್ಷತೆ ಹಾಗೂ ವಿಮಾನ ನಿಲ್ದಾಣದ ಭಧ್ರತೆ ಬಗ್ಗೆ ಸೂಕ್ತ ಕ್ರಮ ಕೈಗೊಒಳ್ಳಲು ಕೇಂದ್ರ ಸರಕಾರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮನಾಥ ರೈ ಪತ್ರ ಬರೆದು ಆಗ್ರಹಿಸಿದ್ದಾರೆ. ನಾಗರಿಕ ವಿಮಾನ ಯಾನ ಸಚಿವ ಪಿ.ಅಶೋಕ್ ಗಜಪತಿ ರಾಜು ಅವರಿಗೆ ಪತ್ರ ಬರೆದಿರುವ ಉಸ್ತುವಾರಿ ಸಚಿವರು, ಮಂಗಳೂರು ವಿಮಾನ ನಿಲ್ದಾಣದ ಭದ್ರತೆ ಹಾಗೂ ವಿಮಾನಗಳಲ್ಲಿ ನಡೆಯುತ್ತಿರುವ ಘಟನೆಗಳು ಕಳವಳಕಾರಿಯಾಗಿವೆ. ಇದು ಪ್ರಯಾಣಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ ಎಂದು ಪತ್ರದಲ್ಲಿ ಬರೆದಿದ್ದಾರೆ. ಕೆಲವು ಸಮಯಗಳ ಹಿಂದೆಯಷ್ಟೇ ಮಂಗಳೂರಿನಿಂದ ದೋಹಾಕ್ಕೆ ಹೊರಟಿದ್ದ ವಿಮಾನ ತಾಂತ್ರಿಕ ವೈಫಲ್ಯಕ್ಕೀಡಾಗಿ ಮರಳಿ ಲ್ಯಾಂಡ್ ಆಗಿರೋದು ಇಲ್ಲಿ ಉಲ್ಲೇಖನೀಯ.