ಕಾಸರಗೋಡು, ಸೆ 29 : ಆಲ್ಟೋ ಕಾರಿನಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ೭೫೦ ಬಾಟ್ಲಿ ಮದ್ಯವನ್ನು ಕಾಸರಗೋಡು ಅಬಕಾರಿ ದಳದ ಸಿಬಂದಿಗಳು ವಶಪಡಿಸಿಕೊಂಡಿದ್ದು, ಕಾರಲ್ಲಿದ್ದವರು ಪರಾರಿಯಾದ ಘಟನೆ ಮುಳಿಯಾರು ಎಂಬಲ್ಲಿ ನಡೆದಿದೆ.ಮದ್ಯ ಸಾಗಾಟ ಕುರಿತು ಲಭಿಸಿದ ಖಚಿತ ಮಾಹಿತಿಯಂತೆ ಅಬಕಾರಿ ದಳದವರು ಕಾರ್ಯಾಚರಣೆ ನಡೆಸಿದ್ದು , ಸಿಬ್ಬಂದಿಗಳನ್ನು ಕಂಡು ಕಾರು ಪರಾರಿಯಾಗಿದ್ದು , ಒಂದು ಕಿಲೋ ಮೀಟರ್ ನಷ್ಟು ಬೆನ್ನಟ್ಟಿದ್ದು, ದಾರಿ ಮಧ್ಯೆ ಕಾರು ನಿಲ್ಲಿಸಿ ಅದರಲ್ಲಿದ್ದ ಇಬ್ಬರು ಪರಾರಿಯಾಗಿದ್ದಾರೆ.ಕಾರಿನ ಹಿಂಭಾಗದಲ್ಲಿ ಬಚ್ಚಿಟ್ಟು ಮದ್ಯವನ್ನು ಸಾಗಾಟ ಮಾಡಲಾಗುತ್ತಿತ್ತು ಎಂದು ಅಬಕಾರಿ ದಳದ ಸಿಬಂದಿಗಳು ತಿಳಿಸಿದ್ದಾರೆ.