, ಜು. 22: ಬಿ.ಸಿ ರೋಡ್ ನ ಮಿನಿ ವಿಧಾನ ಸೌಧದ ಬಳಿ ಶನಿವಾರ ಸಂಜೆ ವ್ಯಕ್ತಿಯೊಬ್ಬರನ್ನು ಬಲವಂತವಾಗಿ ಕಾರಳ್ಳಿ ಕುಳ್ಳಿರಿಸಿ ಕರೆದೊಯ್ದ ಸಿನಿಮೀಯ ಘಟನೆ ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಯಿತು.
ಖಾಸಗಿ ವಿಚಾರಕ್ಕೆ ಸಂಬಂಧಿಸಿದಂತೆ ಇತ್ತಂಡಗಳ ನಡುವೆ ಮಾರಾಮಾರಿ ನಡೆದು ತಂಡಲ್ಲಿದ್ದ ವ್ಯಕ್ತಿಯೊಬ್ಬರನ್ನು ಕಾರಿನಲ್ಲಿ ಅಪಹರಣಕ್ಕೆ ವಿಫಲ ಯತ್ನ ನಡೆಸಿದ್ದಾರೆ. ಪರಿಚಯವಿದ್ದ ತಂಡಗಳ ನಡುವೆ ಖಾಸಗಿ ವಿಚಾರಕ್ಕೆ ಸಂಬಂಧಿಸಿ ಬಿ.ಸಿ.ರೋಡಿನ ಮಿನಿವಿಧಾನ ಸೌಧ ಸಮೀಪದ ಮಾತಿನ ಚಕಮಕಿ ನಡೆದಿದೆನ್ನಲಾಗಿದ್ದು, ತದನಂತರ ಮಾರಾಮಾರಿ ನಡೆದು, ಇನ್ನೊಂದು ತಂಡದಲ್ಲಿದ್ದ ವ್ಯಕ್ತಿಯೊಬ್ಬರು ಕಾರಿನಲ್ಲಿ ಅಪಹರಣ ಮಾಡಲು ಮುಂದಾಗಿತ್ತು. ಘಟನೆ ಬಗ್ಗೆ ಮಾಹಿತಿ ಅರಿತ ಪೊಲೀಸರು, ಬಿ.ಸಿ.ರೋಡಿನ ಸರ್ವೀಸ್ ರಸ್ತೆಯಲ್ಲಿ ನಾಕಾ ಬಂಧಿ ಹಾಕುವ ಮೂಲಕ ವಾಹನಗಳ ತಪಾಸಣೆ ಮುಂದಾಗಿತೆನ್ನಲಾಗಿದೆ.
ತಪಾಸಣೆ ವೇಳೆ ಪೊಲೀಸನ್ನು ಕಂಡ ವ್ಯಕ್ತಿಗಳು ಕಾರನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದು, ಅಪಹರಣಕ್ಕೊಳಗಿದ್ದೆನ್ನಲಾದ ವ್ಯಕ್ತಿಯನ್ನು ಪೊಲೀಸರು ರಕ್ಷಣೆ ಮಾಡಿ, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಘಟನೆಯ ಬಗ್ಗೆ ಗೊಂದಲಗಳು ಉಂಟಾಗಿದ್ದು, ಸಿನಿಮೀಯ ಶೈಲಿಯಲ್ಲಿ ನಡೆದಿರುವ ಈ ಘಟನೆಯ ಸ್ಪಷ್ಟ ಮಾಹಿತಿ ಇನ್ನಷ್ಟೆ ತಿಳಿಯಬೇಕಾಗಿದೆ.