ಬೆಳ್ತಂಗಡಿ, ಜು 18 : ಸರಕಾರವು ಕನ್ನಡ ಶಾಲೆಗಳ ಬಗ್ಗೆ ಸಂಪೂರ್ಣ ನಿರ್ಲಕ್ಷ ತೋರುತ್ತಿರುವುದರಿಂದಲೇ ಪೋಷಕರು ಮಕ್ಕಳನ್ನು ಕನ್ನಡ ಶಾಲೆಗೆ ಸೇರಿಸದೆ ಆಂಗ್ಲಮಾಧ್ಯಮ ಶಾಲೆಗೆ ಸೇರಿಸುತ್ತಿರುವುದು ಇಂದಿನ ವಿದ್ಯಮಾನ.
ಇದಕ್ಕೆ ಬೆಳ್ತಂಗಡಿ ತಾಲೂಕಿನ ಸವಣಾಲು ಎಂಬಲ್ಲಿನ ಶಾಲೆಯ ಕಥೆಯು ಇದಕ್ಕೆ ಹೊರತಾಗಿಲ್ಲ. ಈ ಶಾಲೆಗೆ ಅವ್ಯವಸ್ಥೆ ಕಂಡರೆ ಪೋಷಕರು ತಮ್ಮ ಮಕ್ಕಳನ್ನು ಯಾಕೆ ಈ ಶಾಲೆಗೆ ಕಳುಸಿದುತ್ತಾರೆ ಎನ್ನುವ ಪ್ರಶ್ನೆಗಳು ಮೂಡದಿರದು.
ಸವಣಾಲಿನಲ್ಲಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಿದ್ದು ಸುಮಾರು 80 ವರ್ಷಗಳಷ್ಟು ಹಳೆಯದಾಗಿದೆ. ಒಂದನೇ ತರಗತಿಯಿಂದ ಏಳನೇ ತರಗತಿಯವರಿಗೆ 63 ಮಕ್ಕಳು ಶಾಲೆಗೆ ಬರುತ್ತಿದ್ದಾರೆ. ಇಲ್ಲಿನ ಆಡಳಿತ ಮಂಡಳಿಯಲ್ಲಿ ಘಟಾನುಘಟಿಗಳೇ ಇದ್ದರೂ ಶಾಲೆಯ ಸ್ಥಿತಿ ಮಾತ್ರ ಶೋಚನಿಯಾವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಯಾವ ಅಧ್ಯಾಪಕರಿಗೂ ಸರಿಯಾಗಿ ಪಾಠ ಮಾಡಲು ಮನಸ್ಸು ಬಾರದು.
ಶಾಲಾ ಕಟ್ಟಡದ ಮಾಡು ಹಂಚಿನದ್ದಾಗಿದ್ದು ಕಟ್ಟಡವುತುಂಬಾ ಹಳೆಯದಾಗಿ ಮಾಡು ಶಿಥಿಲಗೊಂಡಿದೆ. ಮಾಡಿಗೆ ಹಾಕಿದ ರೀಪು ಮುರಿದು ಹಂಚು ಹುಡಿಯಾಗಿ ಮಳೆಯ ನೀರುಗೋಡೆಗೆ ಬಿದ್ದು ನೀರಿನಿಂದ ನೆನೆದು ಕುಸಿದು ಬೀಳುವ ಅಪಾಯಕಾರಿ ಹಂತದಲ್ಲಿದೆ. ಗೋಡೆ ಬಿರುಕು ಬಿಟ್ಟಿದೆ. ಮಕ್ಕಳು ಜೀವ ಭಯದಿಂದಲೇ ಶಾಲೆಯಲ್ಲಿ ಇರಬೇಕಾಗುತ್ತಿದೆ. ಮಳೆ ನೀರು ತರಗತಿ ಕೊಠಡಿಯಲ್ಲಿ ಸಂಗ್ರಹವಾಗುತ್ತದೆ. ಮಕ್ಕಳಿಗೆ ಶಾಲೆಗೆ ಬಂದಕೂಡಲೇ ನೀರನ್ನು ಹೊರಗೆ ಹಾಕಿ ಮತ್ತೆ ಪಾಠಕ್ಕೆ ಕುಳಿತುಕೊಳ್ಳಬೇಕಾಗುತ್ತದೆ ಶಾಲಾ ಹಿಂಬದಿಯಗೋಡೆಯಲ್ಲಿ ಬಾಗಿಲಿನ ಚೌಕಟ್ಟು ಮಾತ್ರ ಇದ್ದು ಬಾಗಿಲೇ ಇರುವುದಿಲ್ಲ. ಹೀಗಾಗಿ ಅಲೆಮಾರಿ ದನಗಳು, ಬೀದಿನಾಯಿಗಳು ಒಳಗೆ ಬರುವುದರಿಂದ ಪರಿಸರಅಸಹ್ಯಕರವಾಗಿದೆ. ಒಟ್ಟಾರೆ ಶಾಲೆಯ ಪರಿಸ್ಥಿತಿ ಶೈಕ್ಷಣಿಕ ವಾತಾವರಣಕ್ಕೆ ಪೂರಕವಾಗಿರದೆ ಇರುವುದರಿಂದ ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ.
ಅನುದಾನಿತ ಶಾಲೆಯಾದ್ದರಿಂದ ಶಾಲಾ ಆಡಳಿತ ಮಂಡಳಿ,ಗ್ರಾಮಸ್ಥರು, ಪೋಷಕರು ಹಾಗು ಮುಖ್ಯೋಪಾಧ್ಯಾಯರ ಸಹಿತ ಉಳಿದ ಶಿಕ್ಷಕರ ಪರಸ್ಪರ ಸಹಕಾರ,ಐಕ್ಯಮತ್ಯದಿಂದ ಸವಣಾಲು ಶಾಲೆ ಗತ ವೈಭವವನ್ನು ಮತ್ತೆಗಳಿಸಿಕೊಳ್ಳಬೇಕಾಗಿದೆ.
ಕ್ಲಾಸ್ ನಡೆಯುವಲ್ಲಿಯೇ ನೀರು ಸೋರುತ್ತದೆ. ಅದನ್ನುತೆಗೆಯುವುದೇಒಂದು ಕೆಲಸವಾಗುತ್ತದೆ. ವಿದ್ಯುತ್ ಕೂಡ ಇಲ್ಲ. ಆದಷ್ಟು ಬೇಗ ಶಾಲೆಯನ್ನುರಿಪೇರಿ ಮಾಡಿದರೆ ಒಳ್ಳೆಯದು - ವಿದ್ಯಾರ್ಥಿನಿ ಪೂಜಾ